ಚನ್ನಪಟ್ಟಣ ತಾಲೂಕಿನ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಾಮನಗರ ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ರಾಮನಗರ ಜಿಲ್ಲೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಜನಜಾಗೃತಿ ಸಮಾವೇಶ ಹಾಗೂ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು.ಜಾಥಾ ಕಾರ್ಯಕ್ರಮವನ್ನು ನಗರ ಸಭಾ ಅಧ್ಯಕ್ಷರಾದ ಶ್ರೀ ವಾಸಿಲ್ ಅಲಿಖಾನ್ರವರು ಉದ್ಘಾಟನೆ ಮಾಡಿದರು. ಚನ್ನಪಟ್ಟಣ ಪಟ್ಟಣದ ಪೊಲೀಸ್ ಸ್ಟೇಷನ್ ಸರ್ಕಲ್ನಲ್ಲಿ ಅಂಬೇಡ್ಕರ್ ಪ್ರತಿಮೆ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶ್ರೀ ಚೌಡೇಶ್ವರಿ ಕಲ್ಯಾಣ್ ಮಹಲ್ ವರೆಗೆ ಜಾಥಾ ಮಾಡಿದ್ದು ಜಾಥಾದಲ್ಲಿ ನವಜೀವನ ಸಮಿತಿ ಸದಸ್ಯರು,ಸ್ವಸಹಾಯ ಸಂಘದ ಸದಸ್ಯರು ಗಣ್ಯರು ಸೇರಿ ಸುಮಾರು 1500 ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದ್ದರು.ನಂತರ ಚೌಡೇಶ್ವರಿ ಕಲ್ಯಾಣ್ ಮಹಲ್ ಲ್ಲಿ ಸಮಾವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಸಿ ಪಿ ಯೋಗೇಶ್ವರ್ ರವರು ಉದ್ಘಾಟಿಸಿ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಪ್ರಶಂಸಿಸಿದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಡಾ ಸಿ ಎನ್ ಮಂಜುನಾಥ್ ರವರು ನವಜೀವನ ಸಮಿತಿ ಸದಸ್ಯರನ್ನು ಅಭಿನಂದಿಸಿದರು ಹಾಗೂ ಒಂದು ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಶ್ಲಾಘಿಸಿದರು.ಚನ್ನಪಟ್ಟಣ ವಿಭಾಗದ ಆರಕ್ಷಕ ಉಪಅಧೀಕ್ಷರಾಗ ಶ್ರೀ ವಿ ಸಿ ಗಿರಿಯವರು ನವಜೀವನ ಸಮಿತಿ ಸಾಧಕರಿಗೆ ಸನ್ಮಾನಿಸಿ ಮೆಚ್ಚುಗೆಯ ಮಾತನಾಡಿದರು.ತಾಲೂಕಿನ ತಹಶೀಲ್ದಾರಾದ ಶ್ರೀ ಬಿ ಎನ್ ಗಿರೀಶ್ ರವರು ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದು ಗ್ರಾಮಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ತಿಳಿದುಕೊಂಡಿದ್ದು ಕಾರ್ಯಕ್ರಮದಲ್ಲಿ ಮಹಿಳೆಯಾರಿಗೆ ಸಂಸ್ಕಾರ ಸಂಸ್ಕೃತಿಯ ಬಗ್ಗೆ ತಿಸಿಸುತ್ತ ದುಶ್ಚಟಗಳಿಂದ ದೂರವಿರುವಂತೆ ಮಕ್ಕಳನ್ನು ಬಾಲ್ಯದಿಂದಲೇ ಬೆಳೆಸುವ ಬಗ್ಗೆ ಅತ್ಯುತ್ತಮವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾನಿರ್ದೇಶಕರು, ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದವರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು,ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಸೇರಿ ಸುಮಾರು 1800 ಕ್ಕೂ ಮೀರಿ ಸದಸ್ಯರು ಭಾಗವಹಿಸಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
