ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ )ಹೆಬ್ರಿ ತಾಲೂಕು,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹೆಬ್ರಿ ತಾಲೂಕು,ಆಶ್ರಯದಲ್ಲಿ ದುಶ್ಚಟಗಳ ವಿರುದ್ಧ ಅರಿವು ಮೂಡಿಸುವ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಶ್ರೀಯುತ ಸತೀಶ್ ಪೈ ರವರು ಉದ್ಘಾಟನೆ ಮೂಲಕ ಚಾಲನೆ ನೀಡಿದರು.ನಂತರ ಸಭಾ ಕಾರ್ಯಕ್ರಮವನ್ನು ತಾಲೂಕಿನ ತಹಸಿಲ್ದಾರರಾದ ಶ್ರೀಯುತ ಪುರಂದರ ಕೆ ಅವರು ಉದ್ಘಾಟಿಸಿದರು ನಂತರ ಗ್ರಾಮ ಅಭಿವೃದ್ಧಿ ಕಾರ್ಯಕ್ರಮಗಳಾದ ಸುಜ್ಞಾನ ನಿಧಿ ಪ್ರಮಾಣ ಪತ್ರ ಈ ಶ್ರಮ ಕಾರ್ಡ್ ಪಿಎಂಜಿ ದಿಶಾ ಸರ್ಟಿಫಿಕೇಟ್ ವಿತರಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹೆಬ್ರಿ ತಾಲ್ಲೂಕು ಅಧ್ಯಕ್ಷರಾದ ಶ್ರೀಯುತ ನೀರೆ ಕೃಷ್ಣ ಶೆಟ್ಟಿ ಅವರು ಸಭಾಧ್ಯಕ್ಷರಾಗಿದ್ದರು. ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಕರಾವಳಿ ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ದುಗ್ಗೆ ಗೌಡ ರವರು ಕಾರ್ಯಕ್ರಮದ ಆಶಯ ಭಾಷಣವನ್ನು ಮಾಡುವುದರ ಮೂಲಕ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು .ವೇದಿಕೆ ಮುಖ್ಯ ಅತಿಥಿ ಉಪಸ್ಥಿತಿಯಲ್ಲಿ ತಾಲೂಕು ಜನಜಾಗೃತಿ ವೇದಿಕೆ ಕಾರ್ಕಳ ಅಧ್ಯಕ್ಷರಾದ ಶ್ರೀಯುತ ಉದಯಕುಮಾರ್ ಹೆಗ್ಡೆ ಹಾಗೂ ಜನಜಾಗೃತಿ ವೇದಿಕೆ ಮೂಡಬಿದ್ರೆ ತಾಲೂಕು ಅಧ್ಯಕ್ಷರಾದ ಶ್ರೀಯುತ ಸುಭಾಷ್ ಚಂದ್ರ ಚೌಟ ರವರು ಅನಂತ ಪದ್ಮನಾಭ ಸನ್ನಿಧಿ ಮುಖ್ಯಸ್ಥರಾದ ಶ್ರೀಯುತ ಭಾಸ್ಕರ್ ಜೋಯಿಸ್ ಹಾಗೂ ಹೆಬ್ರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಯುತ ತಾರಾನಾಥ ಬಂಗೇರ ಉಪಸ್ಥಿತಿಯಲ್ಲಿದ್ದರು ಹಾಗೂ ಗೌರವ ಉಪಸ್ಥಿತಿಯಲ್ಲಿ ಪ್ರವೀಣ್ ಕುಮಾರ್ ಹೆಗ್ಡೆ ಸುರೇಶ್ ಭಂಡಾರಿ ಬೋಜ ನಾಯ್ಕ ಹಾಗೂ 6 ವಲಯದ ವಲಯ ಅಧ್ಯಕ್ಷರು ಉಪಸ್ಥಿತಿಯಲ್ಲಿದ್ದರು ತಾಲೂಕು ಯೋಜನಾಧಿಕಾರಿಗಳು ಪ್ರಾಸ್ತಾವಿಕ ನುಡಿಗಳ ಆಡುತ್ತ ಎಲ್ಲರನ್ನು ಸ್ವಾಗತಿಸಿದರು ಹಾಗೂ ತಾಲೂಕು ಕೃಷಿ ಮೇಲ್ವಿಚಾರಕರು ನಿರೂಪಿಸಿದರು ಹೆಬ್ರಿವಲಯದ ಮೇಲ್ವಿಚಾರಕರಾದ ಉದಯ್ ಕುಲಲಾ ರವರು ವಂದನಾರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
