ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಲಬುರ್ಗಿ ಜಿಲ್ಲಾ ವೇದಿಕೆಯನ್ನು ಜನಜಾಗೃತಿ ವಿಭಾಗದ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ & ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನಿರ್ದೇಶಕರಾದ ಜಯಂತ ಪೂಜಾರಿ ರವರ ಉಪಸ್ಥಿತಿಯಲ್ಲಿ ರಚನೆ ಮಾಡಲಾಯಿತು.ಜಿಲ್ಲಾ ವೇದಿಕೆಯ ಅಧ್ಯಕ್ಷರಾಗಿ ಸಿ. ಎನ್. ಬಬಳಗಾಂವ್, ಜಿಲ್ಲಾಕಾರ್ಯದರ್ಶಿಯಾಗಿ ಸತೀಶ್ ಸುವರ್ಣ, ಉಪಾಧ್ಯಕ್ಷರು ಗಳಾಗಿ ಶ್ರೀ ಅನಿಲ್ ಕುಮಾರ್ ಡಾಂಗೆ, ಶ್ರೀ ಚಂದ್ರಶೇಖರ್ ಕರ್ಜಗಿ, ಶ್ರೀ ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಮಾಲತಿ ರೇಷ್ಮೀ,ನರಸಮ್ಮ ಅವಂಟಿ, ಶಾಂತಪ್ಪ ಕೋರೆ ರವರು ಹಾಗೂ ಕೋಶಾಧಿಕಾರಿ ಯವರಾಗಿ ಡಾ. ಸದಾನಂದ ಪೆರ್ಲ ರವರು ಅಯ್ಕೆಯಾದರು. ಜಿಲ್ಲೆಯಲ್ಲಿನ 48 ಮಂದಿ ಗಣ್ಯರು, ಪ್ರಾದೇಶಿಕ ಕಛೇರಿಯ ಜನಜಾಗೃತಿ ಯೋಜನಾಧಿಕಾರಿ ಯವರಾದ ರಾಜೇಶ್ ರವರು & ಜಿಲ್ಲೆಯ ಎಲ್ಲಾ ಯೋಜನಾಧಿಕಾರಿ ಯವರು ಉಪಸ್ಥಿತರಿದ್ದರು.
