ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಧಾರವಾಡ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಧಾರವಾಡ ಜಿಲ್ಲೆಯ ವರದಿ ವರ್ಷದ ಪ್ರಥಮ ಸಭೆಯು ಜಿಲ್ಲಾಧ್ಯಕ್ಷರಾದ ಸಂತೋಷ್ ಆರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷರಾದ ರಾಜಣ್ಣ ಮೂ ಕೊರವಿ, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ಉಪಸ್ಥಿತರಿದ್ದು, ಸಭೆಯ ನಡಾವಳಿಯ ವಿಮರ್ಶೆ ನಡೆಸಿ, ಕಳೆದ ವರ್ಷದ ಸಾಧನೆ, ಪ್ರಸ್ತುತ ವರ್ಷದ ಗುರಿಗಳ ಬಗ್ಗೆ, ವಿಪತ್ತು ನಿರ್ವಹಣಾ ಕಾರ್ಯಕ್ರಮಗಳು, ಯೋಜನೆಯ ಕೆರೆ, ಗಿಡ ನಾಟಿ, ವಾತ್ಸಲ್ಯ ಮನೆ ರಚನೆ, ಪ್ರಸ್ತುತ ವರ್ಷದ ಮಧ್ಯವರ್ಜನ ಶಿಬಿರ ಹಾಗೂ ಅವುಗಳ ಅನುಷ್ಠಾನ, ಜನಜಾಗೃತಿ ಖಾತೆಯ ವ್ಯವಹಾರ ಹಾಗೂ ನವಜೀವ ಸಮಿತಿಗಳ ಬಲವರ್ಧನೆ, ಸ್ವ ಉದ್ಯೋಗ ತರಬೇತಿ ಮುಂತಾದ ವಿಚಾರಗಳಿಗೆ ಪೂರಕವಾಗಿ ಚರ್ಚೆ ನಡೆಯಿತು. ಈ ಸಂದರ್ಭ ಜನಜಾಗೃತಿ ವೇದಿಕೆಯ ಸದಸ್ಯರಾಗಿ ಸೇವೆ ನೀಡಿ ಅಗಳಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೂತನ ಪ್ರಾದೇಶಿಕ ನಿರ್ದೇಶಕರ ಮತ್ತು ಸದಸ್ಯರ ಪರಿಚಯ ಮಾಡಲಾಯಿತು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ಗೌರವಾನ್ವಿತ ಜನಜಾಗೃತಿ ವೇದಿಕೆ ಸದಸ್ಯರು ಉತ್ತಮ ಸಲಹೆಗಳನ್ನು ನೀಡಿದರು. ಮಧ್ಯಮುಕ್ತ ಚುನಾವಣೆಯ ಅಂಗವಾಗಿ ಕರಪತ್ರ ಬಿಡುಗಡೆಯನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು.