ಹೊಳೆನರಸೀಪುರ ತಾಲೂಕಿನ ಶಂಕರಮಠದಲ್ಲಿ ಗಾಂಧಿ ಸ್ಮೃತಿ ಮತ್ತು ನವ ಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಹೊಳೆನರಸೀಪುರ ತಾಲೂಕಿನ ಶಂಕರಮಠದಲ್ಲಿ ಗಾಂಧಿ ಸ್ಮೃತಿ ಮತ್ತು ನವ ಜೀವನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಉದ್ಘಾಟನೆಯನ್ನು ಡಿವೈಎಸ್ಪಿ ಶ್ರೀ ಲಕ್ಷ್ಮಗೌಡ ನೆರವೇರಿಸಿ ದಿನನಿತ್ಯ ನಡೆಯುವ ಸಾವಿರಾರು ಪ್ರಕರಣಗಳಲ್ಲಿ ಮಧ್ಯಪಾನ ವೇ ಕಾರಣವಾಗಿರುತ್ತದೆ ಮದ್ಯಪಾನವು ಸಮಾಜದ ಮಹಾ ಮಾರಿಯಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು, ತಾಲೂಕು ದಂಡಾಧಿಕಾರಿಗಳಾದ ಶ್ರೀ ಕೃಷ್ಣಮೂರ್ತಿ ಟರಾವು ಸ್ವೀಕರಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮಾಜಮುಖಿ ಚಿಂತನೆ ಮತ್ತು ಅದಕ್ಕೆ ಪೂರಕವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ,ಮದ್ಯವರ್ಜನ ಶಿಬಿರದ ಯಶಸ್ವಿ ಮೆಚ್ಚುವಂತಹ ವಿಚಾರ ಎಂದರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಯೋಗೇಶ್ ಮದ್ಯವರ್ಜನ ಶಿಬಿರ ದಿಂದ ಮಧ್ಯ ಮುಕ್ತರಾದ ನವಜೀವನ ಸಮಿತಿಯ ಸದಸ್ಯರು ಮದ್ಯವರ್ಜನ ಶಿಬಿರದ ಯಶಸ್ಸಿಗೆ ಕನ್ನಡಿ ಎಂದರು ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಪೂಜ್ಯರ ದೂರದೃಷ್ಟಿಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು ಸಭಾಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ಸದಸ್ಯರಾದ ಪುಟ್ಟ ಸೋಮಪ್ಪ ವಹಿಸಿ ಕಳೆದ ಏಳು ವರ್ಷಗಳಿಂದ ಹೊಳೆನರಸೀಪುರ ತಾಲೂಕು ಬದಲಾವಣೆ ಯಾಗಿದ್ದರೆ ಅದು ಯೋಜನೆಯಿಂದ ಎಂದರು. ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸನ್ನಕುಮಾರ್ ಜನಜಾಗೃತಿ ಸದಸ್ಯ ಮಹೇಶ್, ಚನ್ನೇಗೌಡ, ಯೋಜನಾಧಿಕಾರಿಗಳಾದ ಶ್ರೀಮತಿ ಸುಮಿತ್ರಾ ,ಭಾಸ್ಕರ್ ಉಪಸ್ಥರಿದ್ದರು. ಸಾಧಕ ನವಜೀವನ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು.