ಹಳಿಯಾಳ ತಾಲೂಕಿನ 1899 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike News

ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಹಳಿಯಾಳದಲ್ಲಿ ನಡೆದ 1899 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೈನ ಕಮಿಟಿಯ ಅಧ್ಯಕ್ಷರಾದ ಶ್ರೀ ಧರನೇಂದ್ರ ದೊಡ್ಡ ಜೈನ ರವರು ಪೂಜ್ಯರು ಮಾಡುತ್ತಿರುವ ಸಮಾಜಮುಖಿ ಸೇವಾಕಾರ್ಯಗಳು ನಮ್ಮ ರಾಜ್ಯ ಮಾತ್ರವಲ್ಲದೇ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಯೋಜನೆಯ ಧಾರವಾಡ, ಕೊಪ್ಪಳ, ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯ csc ಕಾರ್ಯಕ್ರಮಗಳ ನಿರ್ದೇಶಕರಾದ ಸಂತೋಷ್ ಕುಮಾರ್ ರವರು ಮಾತನಾಡಿ ಯೋಜನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಎಲ್ಲವೂ ಸಮಾಜದ ಒಳತಿಗಾಗಿ ಪೂಜ್ಯರ ಮಾರ್ಗದರ್ಶನಲ್ಲಿ ನಡೆಯುವ ಸೇವೆಗಳಾಗಿವೆ ಅದರಲ್ಲಿಯೂ ಪೂಜ್ಯರು ನಡೆಸುವ ವಿಶಿಷ್ಟ ಕಾರ್ಯಕ್ರಮ ಮದ್ಯವರ್ಜನ ಶಿಬಿರ. ಈ ಶಿಬಿರದಲ್ಲಿ ಭಾಗವಹಿಸಿದ ನೀವೆಲ್ಲರೂ ಪುಣ್ಯವಂತರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಪಾನಮುಕ್ತ ಬದುಕನ್ನು ಸಾಗಿಸಬೇಕೆಂದು ಶುಭ ಹಾರೈಸಿದರು. ಸಮಿತಿಯ ಗೌರವ ಅಧ್ಯಕ್ಷರಾದ ಸಿರಾಜ್ ಮುನವಳ್ಳಿ ಮಾತನಾಡಿ ಪೂಜ್ಯರು ನಡೆಸುವ ಇಂತಹ ಪುಣ್ಯದ ಕಾರ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ನನ್ನ ಭಾಗ್ಯವೆಂದರು. ಅಧ್ಯಕ್ಷಿಯ ನುಡಿಗಳನ್ನಾಡಿದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಅಮಿತ್ ಪಂಡಿತ್ ರವರು 5 ವರ್ಷಗಳ ನಂತರ ನಮ್ಮ ಹಳಿಯಾಳ ಪಟ್ಟಣಕ್ಕೆ ಈ ಶಿಬಿರ ದೊರೆತಿದೆ ಸಮಿತಿಯ ಅಧ್ಯಕ್ಷನಾಗಿ ಈ ಪುಣ್ಯದ ಸೇವೆಯಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಪ್ರದೀಪ ಶೆಟ್ಟಿಯವರ ನಿರಂತರ ಮಾರ್ಗದರ್ಶನ ಮತ್ತು ಅವರ ತಂಡ ನೀಡಿದ ಉತ್ತಮ ಸೇವೆಗೆ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಮತಿ ರೇಖಾ ಕಲಘಟಗಿ, ಮಹಿಳಾ ಸಮಿತಿಯ ತಾಲೂಕು ಅಧ್ಯಕ್ಷರಾದ ಭಾರತಿ ಹುಲಗಸಕೊಪ್ಪನವರ, ಪುರಸಭೆ ಸದಸ್ಯರಾದ ಪ್ರಭಾಕರ ಗಜಕೋಶ, ಉದ್ಯಮಿ ನಾರಾಯಣ ಮುತ್ತಲ, ಅಳ್ನಾವರ ಪುರಸಭೆ ಸದಸ್ಯರಾದ ಸುನಂದಾ ಕಲ್ಲು, ಸುಮಾ ಸೊಪ್ಪಿ, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಏನ್., ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಭಾಸ್ಕರ ಪಟಗಾರ, ಆರೋಗ್ಯ ಸಹಾಯಕಿ ಶ್ರೀಮತಿ ಪಿಲೋಮಿನ ಡಿ’ಸೋಜಾ, ಜನಜಾಗೃತಿ ಮೇಲ್ವಿಚಾರಕ ಉಮೇಶ್, ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು, ಸೇವಾ ಪ್ರತಿನಿಧಿಗಳು, ನವಜೀವನ ಸದಸ್ಯರು ಉಪಸ್ಥಿತರಿದ್ದರು.