ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಾಸರಗೋಡು ತಾಲೂಕು ಬದಿಯಡ್ಕ ವಲಯ ಇವರಿಂದ ಪರಮಪೂಜ್ಯ ಡಾll.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸೌಪರ್ಣಿಕ ನವಜೀವನ ಸಮಿತಿ ಬದಿಯಡ್ಕ ಇವರ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿನ ದಯಾ ವಿಶೇಷ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಇವರು ಪ್ರಸ್ತಾವನೆಯೊಂದಿಗೆ ವಿಶೇಷ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಶುಭವನ್ನು ಹಾರೈಸಿದರು. ಸೌಪರ್ಣಿಕ ನವಜೀವನ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಮ ಪಾಟಾಳಿ ಇವರು ತಮ್ಮ ಅನುಭವವನ್ನು ವ್ಯಕ್ತಪಡಿಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ನಿರ್ದೇಶಕರಾದ ವಂದನೀಯ ಫಾದರ್ ರೋಹನ್ ಲೋಬೋ, ಕಾಸರಗೋಡು ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಶ್ವತ್ ಪೂಜಾರಿ ಲಾಲ್ ಬಾಗ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ತಾಲೂಕಿನ ಮಾನ್ಯ ಯೋಜನಾಧಿಕಾರಿ ಶ್ರೀ ಮುಖೇಶ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾನ್ಯ ಯೋಜನಾಧಿಕಾರಿ ಶ್ರೀ ಮೋಹನ್, ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಮಾನ್ಯ ಯೋಜನಾಧಿಕಾರಿ, ಶ್ರೀ ಜೈವಂತ್ ಪಟಗಾರ್, ಜನಜಾಗೃತಿ ಉಡುಪಿ ಪ್ರಾದೇಶಿಕ ವಿಭಾಗದ ಮಾನ್ಯ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ, ಬದಿಯಡ್ಕ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರು ಹಾಗೂ ಪತ್ರಕರ್ತರಾದ ಶ್ರೀ ಅಖಿಲೇಶ್ ನಗುಮುಖ, ಬದಿಯಡ್ಕ ವಲಯದ ಮೇಲ್ವಿಚಾರಕರಾದ ಶ್ರೀ ದಿನೇಶ್, ಶಿಬಿರಾಧಿಕಾರಿಗಳಾದ ಶ್ರೀ ದೇವಿಪ್ರಸಾದ್, ಶ್ರೀ ನಂದಕುಮಾರ್ ಪಿ ಪಿ, ಶ್ರೀ ವಿದ್ಯಾಧರ್, ಆರೋಗ್ಯ ಸಹಾಯಕಿಯರಾದ ಶ್ರೀಮತಿ ಪಿಲೋಮಿನಾ ಡಿ.ಸೋಜಾ, ಶ್ರೀಮತಿ ನೇತ್ರಾವತಿ, ದಯಾ ವಿಶೇಷ ಮಕ್ಕಳ ಶಾಲೆಯ ಎಲ್ಲಾ ಸಿಬ್ಬಂದಿಗಳು, ಸೌಪರ್ಣಿಕ ನವಜೀವನ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಮ ಪಾಟಾಳಿ ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. ಸಂಸ್ಥೆಗೆ ಸೌಪರ್ಣಿಕ ನವಜೀವನ ಸಮಿತಿಯ ವತಿಯಿಂದ ರೂಪಾಯಿ 50,000 ಮೊತ್ತವನ್ನು ದೇಣಿಗೆಯಾಗಿ ನೀಡಲಾಯಿತು. ಎಲ್ಲಾ ಮಕ್ಕಳಿಗೆ ಸಮಿತಿಯ ಸದಸ್ಯರುಗಳು ಸಿಹಿ ತಿಂಡಿಯನ್ನು ಹಂಚಿ, ಬಹುಮಾನಗಳನ್ನು ನೀಡಿ, ಊಟೋಪಚಾರದೊಂದಿಗೆ ವಾರ್ಷಿಕೋತ್ಸವದ ಸಂತೋಷವನ್ನು ಹಂಚಿಕೊಂಡರು.
