ಸೇಡಂ ತಾಲೂಕಿನಲ್ಲಿ 1896 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕಲಬುರ್ಗಿ ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರುಗಳ ಮಾರ್ಗದರ್ಶನದಲ್ಲಿ ವಾಸವಿ ಕಲ್ಯಾಣ ಮಂಟಪ ಸೇಡಂ, ಲಯನ್ಸ್ ಕ್ಲಬ್ ಸೇಡಂ ಕಾಗಿಣಿ, ತಾಲೂಕು ಆರೋಗ್ಯ ಕೇಂದ್ರ ಸೇಡಂ, ಆರಕ್ಷಕ ಠಾಣೆ ಸೇಡಂ, ಪತ್ರಕರ್ತರ ಸಂಘ ಸೇಡಂ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸೇಡಂ ತಾಲೂಕು ಇವರ ಸಹಕಾರದೊಂದಿಗೆ ಜರುಗುವ 1896 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ.ಬ್ರ.ಶ್ರೀ ಶಿವಶಂಕರ್ ಶಿವಾಚಾರ್ಯರು ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜಶೇಖರ್ ಶರಣಪ್ಪ ನೀಲಂಗಿ, ಅಧ್ಯಕ್ಷರು ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಸೇಡಂ ರವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗಣಪತಿ ಮಾಳಜಿ, ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಕಲಬುರ್ಗಿ ಜಿಲ್ಲೆ, ಶ್ರೀ ನಾಗೇಶ್ವರ ರಾವ್ ಮಾಲಿ ಪಾಟೀಲ್, ಹಿರಿಯ ಕಾಂಗ್ರೆಸ್ ಮುಖಂಡರು ಸೇಡಂ, ಶ್ರೀ ಶಿವಯ್ಯ ಸ್ವಾಮಿ ಸಿದ್ದಯ್ಯ ಸ್ವಾಮಿ ಬಿಂಬಳ್ಳಿ, ಉಪಾಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಕಲಬುರ್ಗಿ, ಡಾ. ಶ್ರೀನಿವಾಸ್ ರೆಡ್ಡಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಸೇಡಂ ಕಾಗಿಣ, ಶ್ರೀ ಶರಣು ಮಹಾಗಾವ್, ಅಧ್ಯಕ್ಷರು ಕಾರ್ಯನಿತರ ಪತ್ರಕರ್ತರ ಸಂಘ ಸೇಡಂ ತಾಲೂಕು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.