ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಸಚಿವರಾದ ಗೌರವಾನ್ವಿತ ಅರವಿಂದ ಲಿಂಬಾವಳಿಯವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು .ಪೂಜ್ಯ ಖಾವಂದರು ಬರೆದಂತಹ ಪತ್ರಕ್ಕೆ ಸ್ಪಂದಿಸಿದ ಅವರು ಪೂಜ್ಯರ ಉಪಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಮುಖ್ಯಸ್ಥರ ಸಭೆಯನ್ನು ಶ್ರೀ ಧರ್ಮಸ್ಥಳದ ಸನ್ನಿಧಿಯಲ್ಲಿ ಹಮ್ಮಿಕೊಂಡಿರುತ್ತಾರೆ .ಈ ಸಭೆಯಲ್ಲಿ ಬೆಂಗಳೂರಿನಿಂದ ಮತ್ತು ಜಿಲ್ಲೆಯಿಂದ ಅರಣ್ಯಾಧಿಕಾರಿಗಳು ಆಗಮಿಸಿರುತ್ತಾರೆ .ಶಾಸಕರಾದ ಹರೀಶ್ ಪೂಂಜಾ, ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .ಪ್ರಸ್ತುತ ಅರಣ್ಯ ಪ್ರದೇಶ ಕ್ಷೀಣಿಸುತ್ತಿದೆ ಒತ್ತುವರಿಯ ಕಾರಣಕ್ಕಾಗಿ ಅರಣ್ಯ ನಾಶ ಆಗ್ತಾ ಇದೆ ಪ್ರಾಣಿಗಳು ಭಯ ಭೀತಿಯಿಂದ ಬದುಕುವಂತಾಗಿದೆ .ಪ್ರಾಣಿ ಸಂಕುಲದ ಸಂಖ್ಯೆ ಕಡಿಮೆಯಾಗಿದೆ .ಪ್ರಾಣಿ ಪಕ್ಷಿಗಳು ಕಾಡಿನಿಂದ ನಾಡಿಗೆ ಬಂದು ರೈತರು ಬೆಳೆದ ಬೆಳೆಯನ್ನು ಹಾನಿ ಮಾಡುತ್ತಿದ್ದು.ಕಾಡಲ್ಲಿ ಪ್ರಾಣಿಗಳಿಗೆ ಬೇಕಾದ ಆಹಾರ ವಸ್ತುಗಳು ಲಭ್ಯವಾಗದ ಕೊರತೆ ನಿಭಾಯಿಸುವುದು ಅತಿ ಅವಶ್ಯ ಎಂದು ಪೂಜ್ಯ ಖಾವಂದರ ಅಭಿಪ್ರಾಯಪಟ್ಟರು. ವಿಚಾರದಂತೆ ಕಾಡುಗಳಲ್ಲಿ ಹಣ್ಣು ಹಂಪಲುಗಳ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಗಿಡಗಳನ್ನು ಪೋಷಿಸುವ ರಕ್ಷಣೆ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕು ಹೊಲಗದ್ದೆಗಳ ಬದಿಯಲ್ಲಿ ಪ್ರಾಣಿ ಪಕ್ಷಿಗಳು ಗದ್ದೆಗೆ ಬಾರದಂತೆ ಹೊಲಗಳ ಸುತ್ತ ಮುತ್ತ ಹಣ್ಣು ಹಂಪಲುಗಳ ಗಿಡಗಳನ್ನು ನೆಡಬೇಕು ಎಂದು ಚರ್ಚಿಸಲಾಗಿದೆ.
