ಸಕಲೇಶಪುರ 1615ನೇ ಮಧ್ಯವರ್ಜನ ಶಿಬಿರದ ಶಿಬಿರದ ಸಮಾರೋಪ ಸಮಾರಂಭ

Janajagurthi Vedike News

ಸಕಲೇಶಪುರದ ಜೈನ್ ಪಂತ್ ಸಮುದಾಯ ಭವನದಲ್ಲಿ ಪ್ರಾರಂಭಗೊಂಡ 1615ನೇ ಮಧ್ಯವರ್ಜನ ಶಿಬಿರವು ಸಮಾಪನಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ ಅವರು ದುಷ್ಟ ಚಟ ದಿಂದ ವ್ಯಕ್ತಿಯ ವ್ಯಕ್ತಿತ್ವ ಹಾಳಾಗುವುದರ ಜೊತೆಗೆ ಸರ್ವ ರೀತಿಯ ವಿನಾಶಕ್ಕೆ ಕಾರಣವಾಗುತ್ತದೆ, ಅಂತಹ ವ್ಯಕ್ತಿಗಳ ಪಾಲಿಗೆ ಮಧ್ಯವರ್ಜನ ಶಿಬಿರವು ವರವಾಗಿ ಪರಿಣಮಿಸಿ ಇವತ್ತು ರಾಜ್ಯಾದ್ಯಂತ ಒಂದುವರೆ ಲಕ್ಷಕ್ಕೂ ಮಿಕ್ಕಿದ ಜನರಿಗೆ ಪೂಜ್ಯರ ಮತ್ತು ಯೋಜನೆಯ ಮೂಲಕ ಹೊಸ ಬದುಕು ಸಿಕ್ಕಿದೆ ಎಂದರಲ್ಲದೆ ಯೋಜನೆಯ ಕಾರ್ಯಕರ್ತರನ್ನು ಹಾಗೂ ಇದಕ್ಕೆ ಶ್ರಮಿಸಿದ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳನ್ನು ಅಭಿನಂದಿಸಿದರು. ದುಶ್ಚಟಗಳ ಬಲೆಗೆ ಬಿದ್ದ ಅಸಕ್ತ ವ್ಯಕ್ತಿ ಶಕ್ತರಾಗಿ ಸಾಧಕರಾಗಲು ಮಧ್ಯವರ್ಜನ ಶಿಬಿರವು ಕತ್ತಲೆಯ ದಾರಿಯಲ್ಲಿ ನಡೆಯುವ ಒಬ್ಬ ವ್ಯಕ್ತಿಗೆ ಟಾರ್ಚ್ ಲೈಟ್ ರೀತಿಯಲ್ಲಿ ಸಹಾಯಮಾಡುತ್ತದೆ ಈ ನೆಲೆಯಲ್ಲಿ ಈ ಅವಕಾಶವನ್ನ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತೆ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಬಿ ಜಯರಾಮ ನೆಲ್ಲಿತ್ತಾಯ ರವರು ಕಿವಿಮಾತು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಿಜಯ ರಾಜ್ ವಹಿಸಿ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಹಾಸನ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಮಮತಾ ಹರೀಶ್ ರಾವ್, ಜನಜಾಗೃತಿ ಸದಸ್ಯರಾದ ಗಿರೀಶ್ ಮಂಜುನಾಥ್, ಕಾಂಗ್ರೆಸ್ ಮುಖಂಡ ಶ್ರೀ ಮುರಳಿ, ಯೋಜನಾಧಿಕಾರಿಗಳಾದ ಪುರುಷೋತ್ತಮ್, ಪ್ರಸಾದ್, ಭಾಸ್ಕರ್, ಉಪಸ್ಥಿತರಿದ್ದರು. ಮೇಲ್ವಿಚಾರಕ್ಕೆ ಶ್ರೀಮತಿ ಮೋಹಿನಿ ಕಾರ್ಯಕ್ರಮವನ್ನು ನಿರೂಪಿಸಿ, ಲೆಕ್ಕ ಪರಿಶೋಧಕರಾದ ಶ್ರೀಮತಿ ಕವಿತಾ ವಂದಿಸಿದರು. ಎಂಟು ದಿವಸಗಳ ಈ ಶಿಬಿರದ ಯಶಸ್ಸಿನಲ್ಲಿ ಶಿಬಿರ ಅಧಿಕಾರಿ ಕುಮಾರ್, ಆರೋಗ್ಯ ಕಾರ್ಯಕರ್ತ ವೆಂಕಟೇಶ್, ಜನಜಾಗೃತಿ ಮೇಲ್ವಿಚಾರಕ ಕಿರಣ್, ವಲಯದ ಸೇವಾ ಪ್ರತಿನಿಧಿಗಳು ನವ ಜೀವನ ಪೋಷಕರು, ಶೌರ್ಯ ವಿಪತ್ತು ನಿರ್ವಹಣೆಯ ಸ್ವಯಂಸೇವಕರು, ನವ ಜೀವನ ಸದಸ್ಯರು, ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು, ಯೋಜನೆಯ ಕಾರ್ಯಕರ್ತರು ಸಹಕರಿಸಿದ್ದರು