ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ 163 ನೇ ವಿಶೇಷ ಮದ್ಯವರ್ಜನ ಶಿಬಿರ

Janajagurthi Vedike News

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಜಾಗೃತಿ ಸೌಧದಲ್ಲಿ 163 ನೇ ವಿಶೇಷ ಮದ್ಯವರ್ಜನ ಶಿಬಿರವನ್ನು ಜ್ಞಾನಮೂರ್ತಿ ನವಜೀವನ ಸಮಿತಿ ಸದಸ್ಯರು ದೀಪವನ್ನು ಉದ್ದೀಪನ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿನ್ಸೆಂಟ್ ಪಾಯಸ್ ರವರು ಪ್ರಾಸ್ತಾವಿಕ ಮಾಹಿತಿಯೊಂದಿಗೆ ಒಟ್ಟು ಶಿಬಿರದ ರೂಪುರೇಷೆಯನ್ನು ಮನಮುಟ್ಟುವಂತೆ ವಿವರಿಸಿದರು, ರೇಷ್ಮೆ ನಿಗಮದ ಅಧ್ಯಕ್ಷರು ಕರ್ನಾಟಕ ಸರ್ಕಾರ ಶ್ರೀಯುತ ಎಸ್ ಆರ್ ಗೌಡರವರು ಹಾಗೂ ಜನಜಾಗೃತಿ ಯೋಜನಾಧಿಕಾರಿಗಳಾದ ಮೋಹನ್ ರವರು ಉಪಸ್ಥಿತರಿದ್ದರು, ಕಾಸರಗೋಡು, ಆಂಧ್ರ, ಸೇರಿದಂತೆ ರಾಜ್ಯದ 23 ಜಿಲ್ಲೆಯ 74 ಶಿಬಿರಾರ್ಥಿಗಳು ವಿಶೇಷ ಶಿಬಿರಕ್ಕೆ ದಾಖಲಾಗಿದ್ದು ಎಸ್ ಡಿ ಎಂ ಆಸ್ಪತ್ರೆ ಉಜಿರೆ ಇಲ್ಲಿಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಕರಿಷ್ಮಾರವರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆಯನ್ನು ನಡೆಸಿರುತ್ತಾರೆ. ದಿನಾಂಕ 18/10/2021 ರಿಂದ 25/10/2021 ರ ವರೆಗೆ ನಡೆಯಲಿರುವ ಈ ಶಿಬಿರದ ನಿರ್ವಹಣೆಯನ್ನು ಶಿಬಿರಾಧಿಕಾರಿ ದೇವಿಪ್ರಸಾದ್ ಆರೋಗ್ಯ ಕಾರ್ಯಕರ್ತರು ಶ್ರೀಮತಿ ಜಯಲಕ್ಷ್ಮಿ ಶಿಬಿರದ ನಿರ್ವಹಣೆಯನ್ನು ನೆರವೇರಿಸಲಿದ್ದಾರೆ.