ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ವಸತಿಗೃಹದಲ್ಲಿ ಕೋವಿಡ ಕೇರ್ ಸೆಂಟರ್ ಸೆಂಟರ್ ಆರಂಭ .

Janajagurthi Vedike News

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ರಜತಾದ್ರಿ ವಸತಿಗೃಹದಲ್ಲಿ ನೂತನವಾಗಿ ಕೋವಿಡ ಕೇರ್ ಸೆಂಟರ್ ಆರಂಭಿಸಲಾಯಿತು.ಪೂಜ್ಯ ಖಾವಂದರ ಮಾರ್ಗದರ್ಶನದಲ್ಲಿ ಮಾನ್ಯ ಶಾಸಕರಾದ ಹರೀಶ್ ಪೂಂಜ ರವರು ಸೆಂಟರ್ ಗೆ ಚಾಲನೆ ನೀಡಿದರು.ಈ ಸೆಂಟರ್ ನಲ್ಲಿ ಪ್ರಸ್ತುತ ಬೆಳ್ತಂಗಡಿ ತಾಲ್ಲೂಕಿನ ಸಿಯೋನ್ ಆಶ್ರಮದಲ್ಲಿ ಆಶ್ರಮವಾಸಿಗಳ ಪೈಕಿ 140 ಮಂದಿಗೆ ಕೊರೋನಾ ಪಾಸಿಟಿವ್ ಆಗಿರುವುದರಿಂದ ಇವರನ್ನು ಆಶ್ರಮದಿಂದ ಕೋವಿಡ ಕೇರ್ ಸೆಂಟರ್ಗೆ ಸ್ಥಳಾಂತರಿಸಲಾಗಿದೆ.ಸೆಂಟರ್ ನ ನೋಡಲ್ ಆಫೀಸರ್ ಡಾ ಜಯಕರ‍್ತಿ ಜೈನ್ ವಹಿಸಿರುತ್ತಾರೆ.ಪುತ್ತೂರು ಎಸಿ ಅವರು, ಬೆಳ್ತಂಗಡಿ ತಾಲ್ಲೂಕಿನ ತಹಸಿಲ್ದಾರರು,ರ‍್ಮಸ್ಥಳದ ಸರಕಾರಿ ಹಾಗೂ ಬೆಳ್ತಂಗಡಿಯ ಸರ‍್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇದರ ಆರೋಗ್ಯ ಶುಶ್ರೂಷೆಯ ಕುರಿತಂತೆ ಮರ‍್ಗರ‍್ಶನ ವ್ಯವಸ್ಥೆ ಮಾಡಿರುತ್ತಾರೆ.ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಜನಜಾಗೃತಿ ಪ್ರಾದೇಶಿಕ ವಿಭಾಗದ 2 ಆರೋಗ್ಯ ಸಹಾಯಕಿಯರು ಹಾಗೂ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಸಮಿತಿಯ 5 ಸ್ವಯಂ ಸೇವಕರು, ಓರ್ವ ಶಿಬಿರಾಧಿಕಾರಿ , ವ್ಯವಸ್ಥೆಯ ದೃಷ್ಟಿಯಿಂದ ಮಾನ್ಯ ಕಾರ್ಯನಿರ್ವಹಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಒದಗಿಸಲಾಗಿದೆ. ವೇದಿಕೆಯ ಯೋಜನಾಧಿಕಾರಿಗಳು, ವಿಪತ್ತು ನಿರ್ವಹಣಾ ಯೋಜನಾಧಿಕಾರಿಗಳು ಈ ನಿಟ್ಟಿನಲ್ಲಿ ಸಹಕರಿಸುತ್ತಿದ್ದಾರೆ. ಪೂಜ್ಯರ ಮಾರ್ಗದರ್ಶನದಲ್ಲಿ ರೋಗಿಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಅನ್ನ ಛತ್ರದಿಂದ ವ್ಯವಸ್ಥೆಗೊಳಿಸಲಾಗಿದೆ. ಪ್ರಸ್ತುತ 133 ಮಂದಿ ಆಶ್ರಮವಾಸಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.