ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಶಿರಾ. ಜಿಲ್ಲಾ ಜನಜಾಗೃತಿ ವೇದಿಕೆ ತುಮಕೂರು ಜಿಲ್ಲೆ (ಉತ್ತರ ) ಮತ್ತು ಪರಮಪೂಜ್ಯ ಡಾ॥ ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ.ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಾಗೂ ಕರಪತ್ರ ಬಿಡುಗಡೆ ಕಾರ್ಯಕ್ರಮ.ಈ ಕಾರ್ಯಕ್ರಮಕ್ಕೆ ಶಿರಾ ವಿಧಾನಸಭಾ ಜನಪ್ರಿಯ ಶಾಸಕರಾದ **ಡಾ॥ ರಾಜೇಶ್ ಗೌಡ* ರವರು ಆಗಮಿಸಿ ಉದ್ಘಾಟನೆ ಮತ್ತು ಕರಪತ್ರ ಬಿಡುಗಡೆ ಮಾಡಿ. ದೇಶದಲ್ಲಿ ಮಾದಕ ವಸ್ತುಗಳಿಗೆ ವಿದ್ಯಾರ್ಥಿ ಸಮುದಾಯ ಅಡ್ಡದಾರಿ ಹಿಡಿಯುತ್ತಿರುವುದು ಬೇಸರದ ಸಂಗತಿ ಇದರ ಬಗ್ಗೆ ಎಲ್ಲಾ ಯುವ ಸಮುದಾಯ ಮಾದಕ ವಸ್ತುಗಳಿಗೆ ಬಲಿಯಾಗದಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಮತ್ತು ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುವ ಪೂಜ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಶ್ರೀ ಎಸ್ ಕೆ ರಾಮಚಂದ್ರ ಗುಪ್ತ** ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ವಹಿಸಿಕೊಂಡಿದ್ದರು.ಶ್ರೀ ಡಾ॥ ಮಹೇಂದ್ರಪ್ಪ ನಿವೃತ್ತ ಪ್ರಾಂಶುಪಾಲರು ಶಿರಾ ಮುಖ್ಯ ಅತಿಥಿಗಳಾಗಿ ,ಶ್ರೀ ದಿನೇಶ್ ಡಿ, ನಿರ್ದೇಶಕರು ಅನಂದ್ ಕುಮಾರ್, ಆರಕ್ಷಕರು ASI ಶಿರಾ ಡಾ॥ ಡಿ. ಎಂ. ಗೌಡ, ಆಡಳಿತ ವಿಭಾಗ ತಾಯಿ ಮತ್ತು ಮಗು ವಿಭಾಗ ಶಿರಾ,ಶ್ರೀ ದೇವರಾಜ್ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು. ಶ್ರೀ ನಾಗರಾಜು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು.
ಶ್ರೀ ಮಹಾಲಿಂಗಪ್ಪ, ಮಂಜುಶ್ರೀ ಶಾಲೆಯ ಮುಖ್ಯಸ್ಥರು. ಸದಾಶಿವಗೌಡ ಯೋಜನಾಧಿಕಾರಿಗಳು ಶಿರಾ ಹಾಗೂ ಯೋಜನೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.
