ಧಾರವಾಡದ ರುಡ್ಸೆಟ್ ಸಂಸ್ಥೆಯಲ್ಲಿ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ನವಜೀವನ ಸದಸ್ಯರಿಗಾಗಿ ನಡೆದ ಹತ್ತು ದಿನಗಳ ಸ್ವಉದ್ಯೋಗ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ರವರು, ಭಾಗವಹಿಸಿದ 30 ಮಂದಿ ನವ ಜೀವನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಮಾರ್ಗದರ್ಶನ ನೀಡಿದರು. ಜೀರೋದಿಂದ ಹೀರೋ ಆಗಲು ಹೈನುಗಾರಿಕೆ ಉಪಯೋಗವಾಗುತ್ತದೆ, ತರಬೇತಿಯಲ್ಲಿ ಭಾಗವಹಿಸಿದ ನವಜೀವನ ಸದಸ್ಯರು ಆಲಸಿಗಳಾಗದೆ ಕ್ರಿಯಾಶೀಲರಾಗಬೇಕು ಎಂದರಲ್ಲದೆ ಮಧ್ಯ ಮುಕ್ತರು ಅದೃಷ್ಟಶಾಲಿಗಳು ಎಂದು ಬಣ್ಣಿಸಿ, ಶುಭ ಹಾರೈಸಿ ನವ ಜೀವನ ಸಮಿತಿಯ ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದರು. ಈ ಸಂದರ್ಭ ತರಬೇತಿ ಪಡೆದ ನವ ಜೀವನ ಸದಸ್ಯರ ಪರವಾಗಿ ಎರಡು ಮಂದಿ ಅದ್ಭುತ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಯ ಉಪನ್ಯಾಸಕರುಗಳಾದ ಬಸವರಾಜ್ ಸಂದರ್ಭಕ್ಕೆ ಅನುಗುಣವಾಗಿ ಮಾತಾಡಿದರು. ಸ್ವ ಉದ್ಯೋಗ ತರಬೇತಿ ಮತ್ತು ನವ ಜೀವನ ಸಮಿತಿಗಳ ಬಲವರ್ಧನೆಗೆ ಯೋಜನೆ& ಜನಜಾಗೃತಿಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಜನಜಾಗೃತಿ ಕಾರ್ಯಕ್ರಮಗಳ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ಮಾಹಿತಿ ನೀಡಿದರು. ನಿರೂಪಣೆಯನ್ನು ಉಪನ್ಯಾಸಕರಾದ ಮಧುಕರ್ ಭಟ್ ನೆರವೇರಿಸಿದರೆ. ಧನ್ಯವಾದಗಳು ವಂದನಾರ್ಪಣೆಯನ್ನು ಉಪನ್ಯಾಸಕರಾದ ಮಹೇಶ್ ರವರು ನಡೆಸಿಕೊಟ್ಟರು.
