ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ವಿರಾಜಪೇಟೆ ತಾಲೂಕು ಗೋಣಿಕೊಪ್ಪಲು ವಲಯ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿರಾಜಪೇಟೆ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕೊಡಗು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗೋಣಿಕೊಪ್ಪಲು ವಲಯ, ಗ್ರಾಮ ಪಂಚಾಯತ್ ಗೋಣಿಕೊಪ್ಪಲು, ಸಮುದಾಯ ಆರೋಗ್ಯ ಕೇಂದ್ರ ಗೋಣಿಕೊಪ್ಪಲು, ಆರಕ್ಷಕ ಠಾಣೆ ಗೋಣಿಕೊಪ್ಪಲು, ನವಜೀವನ ಸಮಿತಿ ವಿರಾಜಪೇಟೆ ತಾಲೂಕು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಿರಾಜಪೇಟೆ ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಊರಿನ ದಾನಿಗಳ ಸಹಕಾರದೊಂದಿಗೆ ಪರಮಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ 1900 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭ ಗೋಣಿಕೊಪ್ಪಲುವಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮನೆಯಪಂಡ ಮೇಜರ್ ಬೋಪಣ್ಣ ಇವರು ನೆರವೇರಿಸಿ ಉದ್ಘಾಟಕರ ಮಾತುಗಳನ್ನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ವಿನೂತನ ಕಾರ್ಯಕ್ರಮವೇ ಈ ಮದ್ಯವರ್ಜನ ಶಿಬಿರ. ಸಂಸ್ಥೆಯ ಮುಖೇನ ಸಮುದಾಯದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಮತ್ತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳೆಲ್ಲವು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀ ಕುಲ್ಲಚಂಡ ಎಸ್. ಪ್ರಮೋದ್ ಗಣಪತಿ ಅಧ್ಯಕ್ಷರು 1900 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೋಣಿಕೊಪ್ಪಲು ಇವರು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಕುರಿತು ಅಧ್ಯಕ್ಷೀಯ ಮಾತುಗಳನ್ನಾಡಿದರು. ಶ್ರೀ ಗಣೇಶ್ ಆಚಾರ್ಯ ಯೋಜನಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗ ಉಡುಪಿ ಇವರು ಜನಜಾಗೃತಿ ವೇದಿಕೆ ಪ್ರಾರಂಭ, ಜನಜಾಗೃತಿ ವೇದಿಕೆ ಮೂಲಕ ಸಾಮಾಜಿಕ ಆಂದೋಲನ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆ, ಮದ್ಯವರ್ಜನ ಶಿಬಿರದ ದೈನಂದಿನ ದಿನಚರಿ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಅರುಣ್ ಬಾನಂಗಡ ನಿಕಟಪೂರ್ವ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಕೊಡಗು ಇವರು ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಕರ್ನಾಟಕ ರಾಜ್ಯಾದ್ಯಂತ ದುಶ್ಚಟಮುಕ್ತ ಸಮಾಜ ನಿರ್ಮಾಣದ ಕೈಂಕರ್ಯ ನಡೆಯುತ್ತಿದೆ. ಅದರಲ್ಲೂ ಬಹು ನಿರೀಕ್ಷಿತ ಕಾರ್ಯಕ್ರಮ ಮದ್ಯವರ್ಜನ ಶಿಬಿರ. ಶಿಬಿರದ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಸಂಚಾಲಕರು ಸ್ವಾತಂತ್ರ್ಯ ಹೋರಾಟಗಾರರ ಭವನ ಗೋಣಿಕೊಪ್ಪಲು, ಪ್ರೊ. ಇಟ್ಟೀರ ಬಿದ್ದಪ್ಪ ಅಧ್ಯಕ್ಷರು ಕಾವೇರಿ ವಿದ್ಯಾ ಸಂಸ್ಥೆ ಗೋಣಿಕೊಪ್ಪಲು, ಸಿ. ಡಿ. ಮಾದಪ್ಪ ಕಾರ್ಯದರ್ಶಿ ಕೊಡವ ಸಮಾಜ ಗೋಣಿಕೊಪ್ಪಲು, ಎಂ.ಜಿ. ಮೋಹನ್ ಮಾಲೀಕರು ಜಯಲಕ್ಷ್ಮಿ ಜ್ಯುವೆಲ್ಲರ್ಸ್ ಗೋಣಿಕೊಪ್ಪಲು, ಟಿ. ಎಂ. ಗೋವಿಂದಪ್ಪ ಅಧ್ಯಕ್ಷರು ದಲಿತ ಸಂಘ ಗೋಣಿಕೊಪ್ಪಲು, ಉತ್ತಪ್ಪ ಸದಸ್ಯರು ಉಮಾಮಹೇಶ್ವರಿ ದೇವಸ್ಥಾನ ಗೋಣಿಕೊಪ್ಪಲು, ದಿನೇಶ್ ಬಿ. ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿರಾಜಪೇಟೆ ತಾಲೂಕು, ಎಂ. ಮಂಜುಳಾ ಅಧ್ಯಕ್ಷರು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗೋಣಿಕೊಪ್ಪಲು, ಪಿ. ವಿ. ಸುನಿತಾ ಕೋಶಾಧಿಕಾರಿ 1900 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೋಣಿಕೊಪ್ಪಲು ಇವರುಗಳು ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು. ಕಾರ್ಯಕ್ರಮದಲ್ಲಿ ನಂದಕುಮಾರ್ ಪಿ. ಪಿ. ಶಿಬಿರಾಧಿಕಾರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ನೇತ್ರಾವತಿ ಆರೋಗ್ಯ ಸಹಾಯಕಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ನಿತೇಶ್ ಕೆ. ಮೇಲ್ವಿಚಾರಕರು ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗ ಇವರು ಉಪಸ್ಥಿತರಿದ್ದರು. ನಿತಿನ್ ಮೂಲ್ಯ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಗೋಣಿಕೊಪ್ಪಲು ವಲಯ, ವಲಯದ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳು, ನವಜೀವನ ಸಮಿತಿ ಸದಸ್ಯರುಗಳು, ವಿ.ಎಲ್.ಇ ಮತ್ತು ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
