ಲಘಟಗಿ ತಾಲೂಕಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎಲ್ಲಪ್ಪ ಗೋಣಿನ್ನವರು ನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಸಿದ್ದಾರೂಢ ಮಠದ ನಿರ್ಮಲಾನಂದ ಸ್ವಾಮಿಗಳು ವಹಿಸಿ ಆಶೀರ್ವಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಮಾಂತವ್ವ ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಜಿಲ್ಲೆಯ ನಿರ್ದೇಶಕರಾದ ಸುರೇಶ ಎಮ್ , ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ಹನೀಫ್ ರವರು ಗ್ರೀನ್ ವೇ ಸಂಸ್ಥೆಯ ವಿತರಕರಾದ ಶರಣ್ ರವರು, ಮಿಶ್ರಿ ಕೋಟಿ ಗ್ರಾಮದ ಮುಖ್ಯಸ್ಥರು ಹಾಗು ಸಮಾಜ ಸೇವಕರಾದ ಮುತ್ತಣ್ಣ ಗೌಡ ಪಾಟೀಲ್ ರವರು ಜನಜಾಗೃತಿ ವೇದಿಕೆ ಸದಸ್ಯರಾದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಪ್ರಭಾಕರ್ ನಾಯಕರು, ಜಿಲ್ಲಾ ವೇದಿಕೆಯ ಸದಸ್ಯರಾದ ಜಯರಾಮನ್ ಅವರು ಶ್ರೀ ಶ್ರೀಮತಿ ಪ್ರೇಮ ಯಲ್ಲಪ್ಪ ಶಿರಗುಪ್ಪಿ ಅವರು ಅಧ್ಯಕ್ಷರಾದ ರೆಡ್ಡಿರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.