ರಾಮನಗರ ತಾಲೂಕಿನ ಬಿಡದಿ ವಲಯದ ಶ್ರೀ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ 1507 ನೇ ಮದ್ಯವರ್ಜನ ಶಿಬಿರವನ್ನು ಅವೇರಹಳ್ಳಿ ರೇವಣ್ಣ ಸಿದ್ದೇಶ್ವರ ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಗಳು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು ಈ ಸಂದರ್ಭ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಚ್ ಮಂಜುನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಚಿಕ್ಕಣ್ಣಯ್ಯ, ಸದಸ್ಯರಾದ ತಮ್ಮಣ್ಣ, ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀನಿವಾಸ್ , ಪುರಸಭಾ ಸದಸ್ಯರಾದ ಶ್ರೀಮತಿ ಮಂಜುಳಾ ,ಗೋವಿಂದಪ್ಪ ರೋಟರಿ ಸೆಂಟ್ರಲ್ ಬಿಡದಿ ಅಧ್ಯಕ್ಷರಾದ ಶ್ರೀ ವಸಂತಕುಮಾರ್, ಯೋಜನಾಧಿಕಾರಿಗಳಾದ ಸೂರ್ಯನಾರಾಯಣ, ಭಾಸ್ಕರ್ ,ಶಿಬಿರಾಧಿಕಾರಿ ದಿವಾಕರ ,ಆರೋಗ್ಯ ಸಹಾಯಕಿ ಕುಮಾರಿ ರಂಜಿತಾ , ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭ ಶಿಬಿರಾರ್ಥಿಗಳ ಚಿಕಿತ್ಸೆಗಾಗಿ ಬಿಡದಿಯ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಉಚಿತವಾಗಿ ಔಷಧಿಯ ವ್ಯವಸ್ಥೆಯನ್ನು ಮಾಡಿ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.
