ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಮತ್ತು ಕರಪತ್ರ ಬಿಡುಗಡೆ ಹಾಗೂ ವಿತರಣೆ

Janajagurthi Vedike News

ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಮೈಸೂರು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಇಂದು ಟಿ ನರಸೀಪುರ ತಾಲೂಕಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಸಲಾಯಿತು.ಕಾರ್ಯಕ್ರಮವನ್ನು ಟಿ ನರಸೀಪುರ ವೃತ್ತ ನಿರೀಕ್ಷಕರಾದ ಶ್ರೀ ಕೃಷ್ಣಪ್ಪ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾದಕ ವ್ಯಸನ ವೆಂಬುದು ಬಹಳ ದೊಡ್ಡಜಾಲ ಈ ಜಾಲಕ್ಕೆ ಒಮ್ಮೆ ಜಾರಿದರೆ ಬದುಕು ದುಸ್ತರವಾಗುತ್ತದೆ ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಕರಪತ್ರವನ್ನು ಬಿಡುಗಡೆಗೊಳಿಸಿ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಪಿ ಗಂಗಾಧರ ರೈ ರವರು ಮಾದಕ ವಸ್ತುಗಳಲ್ಲಿ ಹಲವು ಬಗೆಗಳಿವೆ ಮಾದಕ ವಸ್ತು ಸೇವನೆ ಒಂದು ರೋಗ ಇದರ ಬಲೆಗೆ ಬಿದ್ದವರು ಹೊರ ಬರಲು ಕಷ್ಟವಿದೆ ಎಂಬುದನ್ನು ತಿಳಿಸಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಪ್ರಭು ಸ್ವಾಮಿಯವರು ವಹಿಸಿ ಶುಭಹಾರೈಸಿದರು, ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಮತಿ ಭವ್ಯ, ಯೋಜನೆಯ ಮೈಸೂರು ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್ ನಾಗನಾಳ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತಾಡಿದರು. ಈ ಸಂದರ್ಭ ಉಪಸ್ಥಿತರಿದ್ದ ನವಜೀವನ ಸದಸ್ಯರು, ಪೋಷಕರು ಮೇಲ್ವಿಚಾರಕ ಮಿತ್ರರಿಗೆ ನವಜೀವನ ಸಮಿತಿ ಸದಸ್ಯರ ವಾರದ ಫ್ರೀ ಕಾನ್ಫರೆನ್ಸ್ ಸಭೆಯ ಬಗ್ಗೆ ಮಾಹಿತಿ ನೀಡಿ ಸಭೆಯಲ್ಲಿ ಭಾಗವಹಿಸುವ ಸಲುವಾಗಿನ ನಂಬರ್ ಹಾಗೂ ಆಕ್ಸಿಸ್ ಕೋಡ್ ತಿಳಿಸಿ ಡೆಮೋ ತೋರಿಸಲಾಯಿತು. ಯೋಜನೆ ಅಧಿಕಾರಿ ಸಂಜೀವ ನಾಯ್ಕ ನಿರೂಪಿಸಿ ಕಾರ್ಯಕ್ರಮದಲ್ಲಿ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ ಎನ್ ವಂದಿಸಿದರು .