ಪಾಂಡವಪುರ: ಪಾಂಡವಪುರದ ಮೇಲುಕೋಟೆ ಯೋಜನಾ ಕಚೇರಿಯ ಸಮುದಾಯ ಭವನದಲ್ಲಿ ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಜಿಲ್ಲಾಧ್ಯಕ್ಷರಾದ ಎಂಪಿ ಲಿಂಗೇಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ವರದಿ ವರ್ಷದ ಕಾರ್ಯಕ್ರಮಗಳ ವಿಮರ್ಶೆ ವರದಿ ವರ್ಷದ ಈತನಕದ ಜನಜಾಗೃತಿ ಕಾರ್ಯಕ್ರಮಗಳಾದ ಮಧ್ಯವರ್ಜನಿ ಶಿಬಿರ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ತಂಬಾಕು ವಿರೋಧಿ ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ, ನವ ಜೀವನ ಸಮಿತಿಗಳ ಸಭೆ, ಮನೆ ಭೇಟಿ ಮುಂತಾದ ವಿಚಾರಗಳ ಬಗ್ಗೆ ವಿಮರ್ಶೆ ನಡೆಸಲಾಯಿತು, ಯೋಜನೆಯಿಂದ ಜನಜಾಗೃತಿ ಕಾರ್ಯಕ್ರಮಗಳಿಗೆ ನೀಡುವ ಅನುದಾನಗಳ ಬಗ್ಗೆ. ಜನಜಾಗೃತಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಯೋಜನೆಯಿಂದ ಕಾರ್ಯಕ್ರಮಗಳಿಗೆ ನಿಗದಿಪಡಿಸಿದ ಅನುದಾನಗಳನ್ನು ಈ ಸಂದರ್ಭದಲ್ಲಿ ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಭಾಸ್ಕರ್ ತಿಳಿಯಪಡಿಸಿದರು. ಅಕ್ಟೋಬರ್ 2 ಕಾರ್ಯಕ್ರಮದ ಕುರಿತು ಅಕ್ಟೋಬರ್ 2 ಗಾಂಧಿ ಜಯಂತಿ ಕಾರ್ಯಕ್ರಮದ ಆಚರಣೆಯ ಬಗ್ಗೆ ಸಭೆಗೆ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಚೇತನ ಹಾಗೂ ಹೆಚ್ಎಲ್ ಮುರಳಿದರ ರವರು ರೂಪರೇಷಗಳ ಬಗ್ಗೆ ತಿಳಿಯಪಡಿಸಿದರು ಅಲ್ಲದೆ ಈ ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಶಾಸಕರನ್ನು, ಸಂಸದರನ್ನು, ಸ್ವಾಮೀಜಿಗಳನ್ನು, ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಆಹ್ವಾನಿಸುವ ನಿರ್ಣಯವನ್ನು ಕೈಗೊಂಡು ಜಿಲ್ಲಾ ಮಟ್ಟದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು, ಸಾಧಕ ನವ ಜೀವನ ಸಮಿತಿಯ ಸದಸ್ಯರನ್ನು, ನವಜೀವನ ಪೋಷಕರನ್ನು, ಯೋಜನಾಧಿಕಾರಿಗಳನ್ನು ಗುರುತಿಸುವ ಬಗ್ಗೆ
ಗಾಂಧಿ ಜಯಂತಿ ಆಚರಣೆಯ ಸಂದರ್ಭದಲ್ಲಿ ಸಾಧಕ ನವ ಜೀವನ ಸಮಿತಿಯ ಸದಸ್ಯರನ್ನು, ತಾಲೂಕು ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ನವಜೀವನ ಸಮಿತಿಯ ಸಭೆಗಳನ್ನು ನಡೆಸುತ್ತಿರುವ ಪೋಷಕರನ್ನ ಗುರುತಿಸುವುದು, ಜಿಲ್ಲಾಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡಿದ ಒಂದು ಯೋಜನಾ ಕಚೇರಿಯನ್ನು ಗುರುತಿಸಿ ಪ್ರೋತ್ಸಾಹಿಸಲು ನಿರ್ಧರಿಸಲಾಯಿತು.ಹೊಸ ಸದಸ್ಯಗಳ ಸೇರ್ಪಡೆ ಜನಜಾಗೃತಿ ವೇದಿಕೆಗೆ ಪ್ರತಿ ತಾಲೂಕಿನಲ್ಲಿ ಅಗತ್ಯವಿರುವ ಸದಸ್ಯರನ್ನು ಗುರುತಿಸಿ ಸೇರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಗೈರು ಹಾಜರಾಗುತ್ತಿರುವ ಸದಸ್ಯರ ಬಗ್ಗೆ. ಜಿಲ್ಲಾ ವೇದಿಕೆಗಳ ಸಭೆಗೆ ನಿರಂತರ ಗೈರು ಹಾಜರಾಗುತ್ತಿರುವ ಸದಸ್ಯರನ್ನು ಈ ಬಾರಿಯ ಸಭೆಯ ನಿರ್ಣಯವನ್ನು ನಿರ್ಣಯದಂತೆ ಹಾಗೂ ಬೈಲಾ ಪ್ರಕಾರ ಸತತ ಮೂರು ಸಭೆಗಳಿಗೆ ಗೈರು ಹಾಜರಾಗುವ ಸದಸ್ಯರನ್ನು ಕೈಬಿಡುವುದೆಂದು ನಿರ್ಣಯಿಸಿ ಈ ಸಾರಿಯ ಸಭೆಯ ನಿರ್ಣಯಗಳನ್ನು ಅವರಿಗೆ ನೀಡುವುದೆಂದು ನಿರ್ಣಯಿಸಲಾಯಿತು. ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಧರ್ಮಸ್ಥಳದಲ್ಲಿ ನಡೆದ ಮಹಾಸಭೆಯ ವಿಚಾರವನ್ನು ಸಭೆಗೆ ಅಧ್ಯಕ್ಷರಾದ ಎಂಪಿ ಲಿಂಗೇಗೌಡ ತಿಳಿಸಿ ಆ ವಿಚಾರದಂತೆ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಿತು, ಅಧ್ಯಕ್ಷ ಗಾದಿಗೆ ಸುಮಾರು ಎಂಟು ಮಂದಿ ಆಕಾಂಕ್ಷಿಗಳಿದ್ದ ಕಾರಣ. ಕೊನೆಗೆ ನಾಗಮಂಗಲ ತಾಲೂಕಿನ ಸಾಮಾಜಿಕ, ರಾಜಕೀಯ, ಹಾಗೂ ಜನಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಹನುಮಂತಯ್ಯ ಎಂಬವರನ್ನು ಆಯ್ಕೆಗೊಳಿಸಲಾಯಿತು, ಉಪಾಧ್ಯಕ್ಷರಾಗಿ ಮಳವಳ್ಳಿಯ ಶ್ರೀಕಂಠ ಸ್ವಾಮಿ, ಪಾಂಡವಪುರದ ಅಶ್ವತ್ ಕುಮಾರ್, ಕೋಶಾಧಿಕಾರಿಯಾಗಿ ಮಂಡ್ಯದ ಚಂದ್ರು ರವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷ ಮತ್ತು ಪದಾಧಿಕಾರಿಗಳ ಅಭಿನಂದನೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಹಾರ ಹಾಗೂ ಹೂಗುಚ್ಚಗಳನ್ನು ನೀಡಿ ಅಭಿನಂದಿಸಲಾಯಿತು.ಪದಗ್ರಹಣದ 2022 _24 ಅವಧಿಯ ಪದಾಧಿಕಾರಿಗಳ ಪದಗ್ರಹಣವನ್ನು ಮಂಡ್ಯದಲ್ಲಿ ಅಕ್ಟೋಬರ್ 10ರಂದು ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿ ಅಧಿಕಾರ ಹಸ್ತಾಂತರಿಸುವ ಬಗ್ಗೆ ನಿರ್ಣಯಿಸಲಾಯಿತು. ಪೂಜ್ಯರನ್ನು ಅಭಿನಂದಿಸುವ ಬಗ್ಗೆ ರಾಜ್ಯಸಭಾ ಸದಸ್ಯರಾದ ಪೂಜ್ಯರನ್ನು ಜಿಲ್ಲಾ ವೇದಿಕೆ ವತಿಯಿಂದ ಅಭಿನಂದಿಸುವ ಬಗ್ಗೆ ಚರ್ಚೆ ನಡೆದು ಈ ಕಾರ್ಯಕ್ರಮವನ್ನು ಮಾಡಲೇಬೇಕು ಎಂದು ನಿರ್ಣಯಿಸಲಾಯಿತು. ಸಭೆಗೆ ಆಗಮಿಸಿದ ಎಲ್ಲಾ ಪದಾಧಿಕಾರಿಗಳನ್ನು ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ಚೇತನ ರವರು ಸ್ವಾಗತಿಸಿ, ಜಿಲ್ಲಾ ವೇದಿಕೆಯ ಜಮಾ ಖರ್ಚಿನ ವಿಚಾರವನ್ನು ತಿಳಿಸಿ ಸಭೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಸಂದರ್ಭ ಮಂಡ್ಯ ಜಿಲ್ಲಾ ವೇದಿಕೆಯಲ್ಲಿ ಸೇರ್ಪಡೆಗೊಂಡಿರುವ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕುಗಳ ಜಿಲ್ಲಾ ನಿರ್ದೇಶಕರಾದ ಮುರಳೀಧರ ಹೆಚ್ಎಲ್ ರವರು ರಾಜ್ಯವೇದಿಕೆಯ ಪರಿಕಲ್ಪನೆ ,ಯೋಜನೆ ಮತ್ತು ಜಿಲ್ಲಾ ವೇದಿಕೆಗಳ ಸಮನ್ವಯತೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯ ವ್ಯವಸ್ಥೆಯನ್ನು ಪಾಂಡವಪುರದ ಯೋಜನಾಧಿಕಾರಿ ದಯಾನಂದ ಪೂಜಾರಿ ಹಾಗೂ ಮೇಲುಕೋಟೆಯ ಯೋಜನಾಧಿಕಾರಿ ಶ್ರೀಮತಿ ಸರೋಜಾ ಮಾಡಿದ್ದರು. ಸಭೆಯಲ್ಲಿ ಮಧ್ಯವರ್ಜನ ಶಿಬಿರಗಳ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರುಗಳು, ಜಿಲ್ಲೆಯ ಕ್ಷೇತ್ರ ಯೋಜನಾಧಿಕಾರಿಗಳು, ಜಾಗೃತಿ ಅಣ್ಣ, ಜಾಗೃತಿ ಮಿತ್ರ ಪ್ರಶಸ್ತಿ ಪಡೆದ ನವ ಜೀವನ ಸಮಿತಿಯ ಸದಸ್ಯರು, ನವ ಜೀವನ ಸಮಿತಿಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
