ಭದ್ರಾವತಿ ತಾಲೂಕಿನ ನವಜೀವನ ಸಮಿತಿ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಆನಂದ್ ಜಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಮಾರ್ಗದರ್ಶನ ನೀಡುತ್ತಾ ನವಜೀವನ ಸಮಿತಿ ಸದಸ್ಯರ ಬದ್ದತೆ, ಪಾನಮುಕ್ತ ಜೀವನ, ಯೋಜನೆಯಲ್ಲಿ ಇರುವ ಅವಕಾಶಗಳ ಸದ್ಭಳಕೆ, ಸ್ವ ಉದ್ಯೋಗ, ನವಜೀವನ ಸಮಿತಿ ಸದಸ್ಯರ ವಾರದ ಸಭೆ, ತಿಂಗಳ ಸಭೆ, ದೈನಂದಿನ ದಿನಚರಿಗಳು, ದುಡಿಮೆ, ಉಳಿತಾಯ, ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಪಾತ್ರ, ಕೌಟುಂಬಿಕ ಜೀವನ, ಸಾಮಾಜಿಕ ಜೀವನ, ಅನ್ಯ ಚುಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದಂತೆ, ಉತ್ತಮ ಪಾನಮುಕ್ತ ಜೀವನ ನಡೆಸುವಂತೆ ಸಂದೇಶ ನೀಡಿದರು. ಪರಮಪೂಜ್ಯರು ರಾಜ್ಯ ಸಭೆಗೆ ನಾಮನಿರ್ದೇಶನಗೊಂಡಿದ್ದು ನಮ್ಮೆಲ್ಲರ ಬಾಗ್ಯ, ಜೊತೆಯಲ್ಲಿ ನಮ್ಮ ಜವಾಬ್ದಾರಿಗಳು ಇನ್ನು ಹೆಚ್ಚು ಇದೆ ಎಂದು ತಿಳಿಸಿದರು. ಪ್ರಾದೇಶಿಕ ನಿರ್ದೇಶಕರು ಗೀತಾ ಮೇಡಂರವರು ಮಹಿಳಾ ಸಬಲೀಕರಣಕ್ಕೆ ಮಾತೃಷ್ರಿ ಅಮ್ಮನವರ ಕೊಡುಗೆ ಅಪಾರವಾದದ್ದು ಸ್ವ ಸಹಾಯ ಸಂಘಗಳ ಮೂಲಕ ಬದುಕು ಕಟ್ಟಿಕೊಳ್ಳಿ ಎಂದು ಶುಭ ಹಾರೈಸಿದರು. ನವಜೀವನ ಸಮಿತಿ ಸದಸ್ಯರು ಕುಟುಂಬ ಸಮೇತ ಬಂದು ನವಜೀವನೋತ್ಸವ ಕಾರ್ಯಕ್ರಮಕ್ಕೆ ಮೆರುಗು ಬಂದಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ವೇದಿಕೆಯ ಸದಸ್ಯರಾದ ಕರುಣಾ ಮೂರ್ತಿ, ಪಾಲಕ್ಷಪ್ಪ, ಜಯರಾಂ ಗೊಂದಿ, ಜಿಲ್ಲಾ ನಿರ್ದೇಶಕರು, ತಾಲೂಕ್ ಯೋಜನಾಧಿಕಾರಿಗಳು, ಜನಜಾಗೃತಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು, ಆರೋಗ್ಯ ಸಹಾಯಕರು,ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
