ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ.

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಂಗಳೂರು ಪ್ರಾದೇಶಿಕ ವಿಭಾಗದ ಜಿಲ್ಲಾ ಅಧ್ಯಕ್ಷರುಗಳ ಸಭೆ ಇಂದು ನೆಲಮಂಗಲದಲ್ಲಿ ನಡೆಸಲಾಯಿತು. ವೇದಿಕೆಯ ಕ್ರಿಯಾಯೋಜನೆ ಮುಂದಿನ ಕಾರ್ಯಕ್ರಮಗಳ ಕುರಿತು ಮುಖ್ಯವಾಗಿ ನವಜೀವನ ಸಮಿತಿ ಪುನಶ್ಚೇತನ, ಪಾನಮುಕ್ತರ ಆನ್ ಲೈನ್ ಮೀಟಿಂಗ್ , ಪಾನಮುಕ್ತ ಗ್ರಾಮಗಳು, ಪಾನಮುಕ್ತರ ಸ್ವಸಹಾಯ ಸಂಘ, ಪಾನಮುಕ್ತರಿಗೆ ಸ್ವ ಉದ್ಯೋಗ ತರಬೇತಿ ಮುಂತಾದ ವಿಚಾರಗಳ ಕುರಿತಂತೆ ಸಮಗ್ರ ಚರ್ಚೆ ನಡೆಸಲಾಯಿತು. ರಾಜ್ಯಾಧ್ಯಕ್ಷರಾದ ವಿ. ರಾಮಸ್ವಾಮಿ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು ನಿರ್ದೇಶಕರುಗಳು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ ಉಪಸ್ಥಿತರಿದ್ದರು.