ಬೆಂಗಳೂರು ಪ್ರಾದೇಶಿಕ ವಿಭಾಗದ ಚಿಕ್ಕನಾಯಕನಹಳ್ಳಿ ತಾಲೂಕಿನ ದಬ್ಬೆಕಟ್ಟದ ಶ್ರೀ ಮರುಳಸಿದ್ದೇಶ್ವರ ಪ್ರಾರ್ಥನಾ ಮಂದಿರದಲ್ಲಿ 1492 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ

Janajagurthi Vedike News

ಬೆಂಗಳೂರು ಪ್ರಾದೇಶಿಕ ವಿಭಾಗದ ಚಿಕ್ಕನಾಯಕನಹಳ್ಳಿ ತಾಲೂಕಿನ ದಬ್ಬೆಕಟ್ಟದ ಶ್ರೀ ಮರುಳಸಿದ್ದೇಶ್ವರ ಪ್ರಾರ್ಥನಾ ಮಂದಿರದಲ್ಲಿ 1492 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಸಿ.ಎಸ್ ಸುಶ್ರುತ್ ರವರು ನೆರವೇರಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರೇಣುಕಾಸ್ವಾಮಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷರಾದ ಸಿಡಿ ಚಂದ್ರಶೇಖರ್, ತಾಲೂಕು ವೈದ್ಯಾಧಿಕಾರಿಗಳಾದ ಡಾ. ನವೀನ್, ಜನಜಾಗೃತಿ ಸದಸ್ಯರಾದ ಪ್ರಕಾಶ್, ಕೃಷ್ಣೇಗೌಡರು, ಶ್ರೀಮತಿ ಸೌಜನ್ಯ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಯೋಜನಾಧಿಕಾರಿಗಳು ಪ್ರೇಮಾನಂದರವರು ಸ್ವಾಗತಿಸಿ ಮೇಲ್ವಿಚಾರಕರಾದ ಭಾಸ್ಕರ್ ಅವರು ಧನ್ಯವಾದ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೇಲ್ವಿಚಾರಕರಾದ ರವರು ನಡೆಸಿದರು. ಶಿಬಿರದ ಶಿಬಿರಾಧಿಕಾರಿ ಯಾಗಿ ನಂದಕುಮಾರ್ ಅವರು ಆರೋಗ್ಯ ಸಹಾಯಕಿ ಶ್ರೀಮತಿ ನೇತ್ರಾವತಿ ಅವರು ಶಿಬಿರದ ಮೇಲ್ವಿಚಾರಕರಾದ ರಾಜೇಶ್ ರವರು ಕರ್ತವ್ಯ ನಿರ್ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನವಜೀವನ ಸಮಿತಿ ಸದಸ್ಯರು, ಒಕ್ಕೂಟದವರು, ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.