ಬೆಂಗಳೂರು ಪ್ರಾದೇಶಿಕ ವಿಭಾಗದ ತುರುವೇಕೆರೆ ಗ್ರಾಮಾಂತರ ತಾಲೂಕಿನಲ್ಲಿ ನಡೆದ ಮದ್ಯವರ್ಜನ ಶಿಬಿರದ ನವ ಜೀವನ ಸಮಿತಿ ಸದಸ್ಯರ ಎರಡನೇ ಮಾಸಿಕ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಿರುಪಾಕ್ಷರವರು ನೆರವೇರಿಸಿದರು. ನವಜೀವನ ಪೋಷಕರ ಅಭಿಪ್ರಾಯ, ನವ ಜೀವನ ಸಮಿತಿಯ ಹಾಜರಾತಿ, ದಾಖಲಾತಿ ಪರಿಶೀಲನೆ ನಡೆಸಲಾಯಿತು. ಬಳಿಕ ನವ ಜೀವನ ಸದಸ್ಯರ ಅನುಭವ ಹಂಚಿಕೆ ಮಾಡಲಾಯಿತು. ಮತ್ತು ಡಿಸೆಂಬರ್ ತಿಂಗಳಲ್ಲಿ ಧರ್ಮಸ್ಥಳದಲ್ಲಿ ನಡೆಯುವ ಶತದಿನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಸಮಗ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
