ಯೋಜನಾ ಕಚೇರಿಯಲ್ಲಿ ನವ ಜೀವನ ಸಮಿತಿ ಸದಸ್ಯರ ಮತ್ತು ಪೋಷಕರ ಸಭೆಯನ್ನು ನಡೆಸಿ, ಸಭೆ ನಡೆಸದೆ ಜವಾಬ್ದಾರಿಯಿಂದ ನುಣುಚಿಕೊಂಡ ಸೇವಾ ಪ್ರತಿನಿಧಿಗಳನ್ನು ಹಾಗೂ ಸಭೆಗೆ ಒತ್ತು ನೀಡದ ಮೇಲ್ವಿಚಾರಕರಿಗೆ, ಮಧ್ಯವರ್ಜನ ಶಿಬಿರಕ್ಕೆ ಪಟ್ಟ ಶ್ರಮ ಮಾಡಿದ ಖರ್ಚು , ಗಣ್ಯರ ಸಹಕಾರ ಮುಂತಾದ ವಿಚಾರಗಳನ್ನು ಮನವರಿಕೆ ಮಾಡಿ ವಲಯದಲ್ಲಿ ನೇಮಿಸಲ್ಪಟ್ಟ ಪೋಷಕರ ಮೂಲಕ ಸಭೆ ನಡೆಸುವಂತೆ ತಿಳಿಸಿ ಅದಕ್ಕೆ ಪೂರಕವಾಗಿ ವಲಯಮಟ್ಟದ ನವ ಜೀವನ ಸಮಿತಿಗಳ ಸಭೆಗೆ ದಿನಾಂಕ ನಿಗದಿಪಡಿಸಲಾಯಿತು. ಈ ಸಂದರ್ಭ ಪ್ರಸ್ತುತ ವರ್ಷ ನಡೆದ ಶಿಬಿರದ ಮತ್ತು ಹಳೆಯ ನವ ಜೀವನ ಸಮಿತಿಯ ಸದಸ್ಯರುಗಳ ಪಟ್ಟಿಯನ್ನು ಆಧರಿಸಿ ವಿಮರ್ಶೆ ನಡೆಸಲಾಯಿತು. ತಾಲೂಕು ಮಟ್ಟದ ಮಾಸಿಕ ಸಭೆಯ ದಿನಾಂಕ ನಿಗದಿ ತಾಲೂಕು ಮಟ್ಟದ ನವಜೀವನ ಸಮಿತಿಯ ಸಭೆಯನ್ನು ನಡೆಸಬೇಕೆಂಬ ನವಜೀವನ ಸಮಿತಿ ಸದಸ್ಯರ ಅಪೇಕ್ಷೆಯಂತೆ ಇನ್ನು ಮುಂದಕ್ಕೆ ಪ್ರತಿ ತಿಂಗಳ ಎರಡನೇ ಶುಕ್ರವಾರ ಸಂಜೆ 3 ಗಂಟೆಗೆ ನಡೆಸಲು ನಿರ್ಧರಿಸಲಾಯಿತು.
ಪದಾಧಿಕಾರಿಗಳ ಆಯ್ಕೆ ತಾಲೂಕು ಮಟ್ಟದ ನವಜೀವನ ಸಮಿತಿಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವ ನೆಲೆಯಲ್ಲಿ ಐದು ಮಂದಿ ಪದಾಧಿಕಾರಿಗಳನ್ನು ಅಧ್ಯಕ್ಷ, 2 ಉಪಾಧ್ಯಕ್ಷ ,ಕೋಶಾಧಿಕಾರಿ, ಕಾರ್ಯದರ್ಶಿ,ಆಯ್ಕೆ ಮಾಡಿ ತಿಂಗಳ ಸಭೆಗೆ ಅವರುಗಳ ವ್ಯಾಪ್ತಿಯ ನವ ಜೀವನ ಸಮಿತಿಯ ಸದಸ್ಯರನ್ನು ಕರೆತರುವ ಜವಾಬ್ದಾರಿಯನ್ನು ನೀಡಲಾಯಿತು. ಈ ಸಂದರ್ಭ ತಾಲೂಕು ಯೋಜನಾಧಿಕಾರಿಗಳಾದ ದಯಾನಂದ ಪೂಜಾರಿ, ಭಾಸ್ಕರ್, ಜನಜಾಗೃತಿ ಮೇಲ್ವಿಚಾರಕ ಕಿರಣ್, ಮೇಲ್ವಿಚಾರಕರಾದ ಸುಮಂಗಲ, ಮಂಜುನಾಥ್, ನವಜೀವನ ಸಮಿತಿಯ ಪದಾಧಿಕಾರಿಗಳಾದ ಧನಂಜಯ, ದಿನೇಶ್, ರಾಚಾಚಾರಿ , ಶಿವರಾಜ್, ಶಿವಣ್ಣ, ವಲಯಗಳಿಗೆ ಸಂಬಂಧಪಟ್ಟ ಪೋಷಕರು ಉಪಸ್ಥಿತರಿದ್ದರು.
