ನವಜೀವನ ಸಮಿತಿ ಸದಸ್ಯರಿಗೆ 3 ದಿನಗಳ ಹೈನುಗಾರಿಕೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ:

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ., ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಉಡುಪಿ ಪ್ರಾದೇಶಿಕ ವಿಭಾಗ, ರಾಷ್ಟ್ರೀಯ ಸ್ವಸಹಾಯ ಸಂಘಗಳ ತರಬೇತಿ ಸಂಸ್ಥೆ, ಉಡುಪಿ . ಇದರ ಸಹಯೋಗದೊಂದಿಗೆ ನಡೆಸಿದ ನವಜೀವನ ಸಮಿತಿ ಸದಸ್ಯರಿಗೆ 3 ದಿನಗಳ ಹೈನುಗಾರಿಕೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ.39 ನವಜೀವನ ಸದಸ್ಯರು ಪ್ರಾದೇಶಿಕ ವಿಭಾಗದ್ಯಂತ ಆಗಮಿಸಿ ತರಬೇತಿ ಪಡೆದರು. ಇವರಿಗೆ ನವಜೀವನ ಬ್ಯಾಡ್ಜ್ ,ಭಾಗವಹಿಸುವಿಕೆಯ ಪ್ರಮಾಣಪತ್ರ, ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಬರೆದ ಹೈನುಗಾರಿಕೆ ಕುರಿತಾದ ಮಾಹಿತಿ ಪುಸ್ತಕ ನೀಡಲಾಗಿದೆ.ಸಮಾರೋಪ ಸಮಾರಂಭದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ಪಾಯಸ್, ವೇದಿಕೆಯ ನಿಕಟಪೂರ್ವ ರಾಜ್ಯಅಧ್ಯಕ್ಷರಾದ ದೇವದಾಸ್ ಹೆಬ್ಬಾರ್ , ಜಿಲ್ಲಾಧ್ಯಕ್ಷರಾದ ನವೀನ್ ಅಮೀನ್, ನಿರ್ದೇಶಕರಾದ ಗಣೇಶ್, ಯೋಜನಾಧಿಕಾರಿ ಜೈವಂತ ಪಟಗಾರ್, ಪ್ರಾಂಶುಪಾಲರಾದ ಉಲ್ಲಾಸ ಮೇಸ್ತ, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಉಪಸ್ಥಿತರಿದ್ದರು.