ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡದ ಗಾಂಧಿನಗರದ ರುಡ್ಸೆಟ್ ಸಂಸ್ಥೆಯಲ್ಲಿ ಪಾನಮುಕ್ತರಿಗೆ ನಡೆಸಲಾದ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಶ್ರೀ ದುಗ್ಗೇಗೌಡ ಸರ್ ರವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಪರಮಪೂಜ್ಯರ 54ನೇ ಪಟ್ಟಾಭಿಷೇಕದ ವರ್ಧಂತ್ಯೋತ್ಸವದ ಪುಣ್ಯದ ದಿನದಲ್ಲಿ ಈ ಅವಕಾಶ ನಿಮಗೆ ಸಿಕ್ಕಿರುವುದು ಅದೃಷ್ಟದ ಸಂಗತಿ. 1982 ನೇ ಇಸವಿಯಲ್ಲಿ ಪೂಜ್ಯರು ಹುಟ್ಟುಹಾಕಿದ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರುಡ್ಸೆಟ್ ಸಂಸ್ಥೆ ಇಂದು ವಿಶ್ವದ ಅಗ್ರಮಾನ್ಯ ಸೇವಾ ಸಂಸ್ಥೆಯಾಗಿ ನಿರ್ಮಾಣವಾಗಿದ್ದಲ್ಲದೆ. ಇಡಿ ವಿಶ್ವವೇ ಬೆಕ್ಕಸಬೆರಗಾಗಿ ನೋಡುವಷ್ಟರ ಮಟ್ಟಿಗೆ ಎತ್ತರವಾಗಿ ಬೆಳೆದಿದೆ. ಈ ಎರಡು ಸಂಸ್ಥೆಯಿಂದ ಸಾವಿರಾರು ಜನ ಬದುಕನ್ನು ಕಟ್ಟಿಕೊಂಡಿದ್ದಾರೆ. ತಾವೆಲ್ಲರೂ ನಾನು ಏನಾಗಬೇಕು ನನ್ನ ಕುಟುಂಬ ವ್ಯವಸ್ಥೆ ಹೇಗಿರಬೇಕು ಎಂದು ಅವಲೋಕನ ಮಾಡಿ ದುಡಿಮೆ ಮಾಡಬೇಕು, ನಿಜವಾದ ಬಡತನ ಇರುವುದು ಸೋಮಾರಿತನ ಇರುವ ಜನರಲ್ಲಿ, ಸೋಮಾರಿತನದಿಂದ ಹೊರಗೆ ಬಂದು ಬೆವರಿಳಿಸಿ ದುಡಿದರೆ ಪ್ರತಿಯೊಬ್ಬರು ಶ್ರೀಮಂತರಾಗಬಹುದು. ಒಂದು ಅತ್ಯುತ್ತಮ ಸಂಸ್ಥೆಗೆ – ಸ್ವಾಮಿ ನಿಮ್ಮನ್ನು ಕರೆತಂದಿದ್ದಾರೆ ಇದರ ಸದುಪಯೋಗ ನಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು. ಬಡತನ ಶಾಪವಲ್ಲ ಹಾಗೆ ಶ್ರೀಮಂತಿಕೆ ವರವಲ್ಲ ಪೂಜ್ಯರ ಮಾತಿನಂತೆ ತಮ್ಮಲ್ಲಿರುವ ಕೌಶಲ್ಯವನ್ನು ಅರ್ಥಮಾಡಿಕೊಂಡು ಶ್ರಮವಹಿಸಿ ದುಡಿಮೆ ಮಾಡಿದರೆ ಯಶಸ್ಸು ತನ್ನದಾಗಿಸಿಕೊಳ್ಳಬಹುದು ಎಂದು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಗವಿಸಿದ್ದಪ್ಪ, ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿಗಳಾದ ಶ್ರೀ ನಾರಾಯಣ ಪಾಲನ್, ನಾಗೇಶ್ ವೈ. ಎ, ಹಾಗೂ ಸಂಸ್ಥೆ ಉಪನ್ಯಾಸಕರಾದ ಶ್ರೀ ಜಗದೀಶ್ ಪೂಜಾರ್, ಶ್ರೀ ಚನ್ನಪ್ಪ ಉಪಸ್ಥರಿದ್ದರು. ತರಬೇತಿಯಲ್ಲಿ ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹಾವೇರಿ ಜಿಲ್ಲಾ ಯೋಜನಾ ವ್ಯಾಪ್ತಿಯ ಒಟ್ಟು 37 ಸದಸ್ಯರು ಭಾಗವಹಿಸಿರುತ್ತಾರೆ
