ಧಾರವಾಡ ಪ್ರಾದೇಶಿಕ ವಿಭಾಗದ ಜಗಳೂರು ಜಿಲ್ಲೆಯ ಪ್ರೇರಣಾ ಚರ್ಚ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯನ್ನು ಧಾರವಾಡ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡ,ಫಾದರ್ ವಿಲಿಯಂ ಮಿರಾಂದ್,ಬಿ.ಸಿ ಸಂಜೀವ್ ಮೂರ್ತಿ, ಷಡಕ್ಷರಪ್ಪ, ಮಂಜುನಾಥ್, ನಿರ್ದೇಶಕರಾದ ಜನಾರ್ಧನ್ ರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯಲ್ಲಿ ಮದ್ಯವರ್ಜನ ಶಿಬಿರ, ಅಕ್ಟೋಬರ್.2ರ ಕಾರ್ಯಕ್ರಮ, ಸ್ವ ಉದ್ಯೋಗ ತರಬೇತಿ, ನವಜೀವನ ಸಮಿತಿಗಳ ಬಲವರ್ಧನೆ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ, ಸಾಮಾಜಿಕ ಅರಣ್ಯೀಕರಣ, ಫೋನ್ ಕಾನ್ಫರೆನ್ಸ್ ಮೀಟಿಂಗ್, ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು ಸಭೆಯಲ್ಲಿ ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳು, ಜಗಳೂರು ಜಿಲ್ಲೆಯ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಉಪಸ್ಥಿತರಿದ್ದರು.
