ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನವಜೀವನ ಹಾಗೂ ಗಾಂಧಿ ಸ್ಮೃತಿ ಕಾರ್ಯಕ್ರಮ: ಬಂಗಾರಪೇಟೆ

Janajagurthi Vedike News

ಬಂಗಾರಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಗಾರಪೇಟೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಕೋಲಾರ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ 152ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನವಜೀವನ ಹಾಗೂ ಗಾಂಧಿ ಸ್ಮೃತಿ ಕಾರ್ಯಕ್ರಮವು ಗಾಯತ್ರಿ ವಿಪ್ರಭ ಸಭಾಭವನದಲ್ಲಿ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಿಕೆ ಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಮಹೇಶ್ ಬಿ ವಿ ಯವರು ನಡೆಸಿ ಯುವಜನತೆ ದುಶ್ಚಟ ಮುಕ್ತ ವಾದಲ್ಲಿ ಮಾತ್ರ ಭಾರತ ದೇಶ ಸದೃಢವಾಗಲು ಸಾಧ್ಯ, ನಮ್ಮವರಲ್ಲಿ ಮಧ್ಯವರ್ಜನ ಶಿಬಿರ ಗಳಂತಹ ದುಶ್ಚಟ ಮುಕ್ತ ಜೀವನ ನಡೆಸಲು ಪ್ರೇರಣೆ ನೀಡುವಂತಹ ಕಾರ್ಯಕ್ರಮ ನಡೆಸುತ್ತಿರುವುದು ಬಹಳ ಶ್ಲಾಘನೀಯ, ಇಂತಹ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರ ಇದ್ದೇ ಇರುತ್ತದೆ ಮತ್ತು ಪರಮಪೂಜ್ಯರಿಗೆ ವಿಶೇಷವಾದ ಅಭಿನಂದನೆಗಳು ಎಂದು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಹಾತ್ಮ ಗಾಂಧೀಜಿಯ ಬಗ್ಗೆ ಅತ್ಯುತ್ತಮ ಮಾಹಿತಿಯನ್ನು ಸರ್ಕಾರಿ ಕಾನೂನು ಕಾಲೇಜು ಕೋಲಾರ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ. ಪ್ರಸನ್ನಕುಮಾರಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರವಿ ರೆಡ್ಡಿ ಶುಭ ಹಾರೈಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕರಾದ ಚಂದ್ರಶೇಖರ್ ರವರು ಆಶಯ ಮಾತುಗಳನ್ನಾಡಿದರು. ಜನಜಾಗೃತಿ ವೇದಿಕೆ ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜನಜಾಗೃತಿ ಸದಸ್ಯರಾದ ಚಂದ್ರಶೇಖರ್ ಅವರ ವೈಷ್ಣವ ಜನತೋ ಹಾಡಿನೊಂದಿಗೆ ಎಲ್ಲರೂ ಗಾಂಧೀಜಿಗೆ ಪುಷ್ಪನಮನ ಸಲ್ಲಿಸಿದರು. ಜನಜಾಗೃತಿ ಸದಸ್ಯರು ನವಜೀವನ ಸಮಿತಿ ಸದಸ್ಯರಾದ ಅಂತಹ ಮಂಜುನಾಥ್ ಅನುಭವ ಹಂಚಿಕೊಂಡರು. ಸಾಧನೆ ಮಾಡಿದ ಐದು ಜನ ನವಜೀವನ ಸಮಿತಿ ಸದಸ್ಯರನ್ನು ಗೌರವಿಸಲಾಯಿತು. ತಾಲೂಕು ಯೋಜನಾಧಿಕಾರಿಗಳಾದ ಲೋಕೇಶ್ ರವರು ಸ್ವಾಗತಿಸಿ ಮೇಲ್ವಿಚಾರಕರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರು, ಕಾರ್ಯಕರ್ತರು, ನವಜೀವನ ಸಮಿತಿ ಸದಸ್ಯರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.