ಮಧುಗಿರಿ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತುಮಕೂರು 2 ಜಿಲ್ಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಜಿಲ್ಲೆ, ಇವರ ಸಹಯೋಗದೊಂದಿಗೆ ಮಧುಗಿರಿ ತಾಲೂಕಿನ ಒಕ್ಕಲಿಗರ ಸಮುದಾಯ ಭವನದಲ್ಲಿ 152 ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀ SK ರಾಮಚಂದ್ರಗುಪ್ತ ರವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎಂ. ವಿ. ವೀರಭದ್ರಯ್ಯ ರವರು ನಡೆಸಿ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಧರ್ಮಸ್ಥಳ ಸಂಸ್ಥೆ ತನ್ನದೇ ಆದ ಕೆಲಸ ನಿರ್ವಹಿಸುತ್ತಿದ್ದು, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆಯ ಕಾರ್ಯ ಶ್ಲಾಘನೀಯ, ಪೂಜ್ಯರ ಸಮಾಜಮುಖಿ ಕಾರ್ಯ ಕ್ರಮ ವನ್ನು ಸರಕಾರದ ಮಟ್ಟದಲ್ಲೂ ಮಾಡಲು ಸಾಧ್ಯ ಇಲ್ಲ ಪೂಜ್ಯರ ಇಂತಹ ಕಾರ್ಯ ಕ್ರಮಗಳಿಂದ ಅದೆಷ್ಟೋ ಕುಟುಂಬ ಬದುಕನ್ನು ಕಟ್ಟಿಕೊಂಡಿದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಮಾನಂದ ಸ್ವಾಮೀಜಿ ಶ್ರೀರಾಮ ಕ್ಷೇತ್ರ ತಗ್ಗಿ ಹಳ್ಳಿ ರವರು ಮಾತನಾಡುತ್ತಾ ಖಾವಂದರ ಮಾತಿನಂತೆ ಧರ್ಮದೊಂದಿಗೆ ಜಾಗೃತಿ ಮೂಡಿದಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಆಶೀರ್ವಚನ ಮಾಡಿದರು ತಾಲೂಕು ತಹಸೀಲ್ದಾರ್ ಹಾಗು ದಂಡಾಧಿಕಾರಿ ವೈ ರವಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶ್ರೀ ಶೀನಪ್ಪ M ಪ್ರಾದೇಶಿಕ ನಿರ್ದೇಶಕರು ಬೆಂಗಳೂರು ಯೋಜನೆಯ ಕಾರ್ಯ ವೈಖರಿಯ ಬಗ್ಗೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಮಧುಗಿರಿ ಪುರಸಭೆ ಅಧ್ಯಕ್ಷರು ತಿಮ್ಮರಾಜು, ಒಕ್ಕಲಿಗ ಸಂಘದ ಅಧ್ಯಕ್ಷರು P S ರಾಜಶೇಖರ್ , ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಚೆನ್ನಬಸವಣ್ಣ ,ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಖಾವಂದರ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರ ಸಂದೇಶವನ್ನು ತಿಳಿಸಲಾಯಿತು. ನವಜೀವನ ಸಮಿತಿಯ ಸದಸ್ಯರಾದ ರಮೇಶ್ ಮಧುಗಿರಿ , ತಮ್ಮ ಅನುಭವ ಹಂಚಿಕೊಂಡರು. ಮಧುಗಿರಿ ಶಿರಾ , ಕೊರಟಗೆರೆ, ಪಾವಗಡ, ಚಿಕ್ಕನಾಯಕನಹಳ್ಳಿ ಸಾಧಕ ನವಜೀವನ ಸಮಿತಿಯ ಸದಸ್ಯರನ್ನು ಅಭಿನಂದಿಸಲಾಯಿತು. ಚಿಕ್ಕನಾಯಕನಹಳ್ಳಿ ಶಿವಾನಂದ ಮತ್ತು ಮಧುಗಿರಿಯ ಲಕ್ಷ್ಮಿನಾರಾಯಣ ರವರಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸ್ತಾವಿಕಮಾತಿನೊಂದಿಗೆ ಎಲ್ಲರನ್ನು ಶಿರಾ ತಾಲೂಕಿನ ಯೋಜನಾಧಿಕಾರಿ ಸದಾಶಿವ ಗೌಡ ಸ್ವಾಗತಿಸಿದರು.ಈ ಸಂದರ್ಭ ಮಾನ್ಯ ಶಾಸಕರಿಗೆ ಮಂಡನೆ ಮಾಡುವ ಹಕ್ಕೊತ್ತಾಯದ ವಾಚನವನ್ನು ಯೋಜನಾಧಿಕಾರಿ ಪ್ರೇಮಾನಂದ ರವರು ನೆರವೇರಿಸಿದರು.ಜಿಲ್ಲೆಯ ಯೋಜನಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು ನವಜೀವನ ಪೋಷಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಬಾಲಕೃಷ್ಣ,ಹಾಗು ದಿನೇಶ್ ಕುಮಾರ್ ಯೋಜನಾಧಿಕಾರಿಗಳು ಮತ್ತು ಅಶೋಕ್ DM ನಿರ್ವಹಿಸಿದರು. ಯೋಜನಾಧಿಕಾರಿ ನಂಜುಂಡಿ ಯವರು ವಂದನಾರ್ಪಣೆ ಮಾಡಿದರು
