ತುಮಕೂರು 1 ಜಿಲ್ಲಾ ಕಛೇರಿ ವ್ಯಾಪ್ತಿಯಲ್ಲಿ ಸ್ವಾಸ್ತ್ಯ ಸಂಕಲ್ಪ ತರಬೇತುದಾರರ ತರಬೇತಿ ಮತ್ತು ಜಿಲ್ಲಾ ಜಾಗೃತಿ ವೇದಿಕೆ ಸದಸ್ಯರ ಸಭೆ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ತುಮಕೂರು 1 ಜಿಲ್ಲೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು 1 ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರು 1 ಜಿಲ್ಲಾ ಕಛೇರಿ ವ್ಯಾಪ್ತಿಯ ಸ್ವಾಸ್ತ್ಯ ಸಂಕಲ್ಪ ತರಬೇತುದಾರರ ತರಬೇತಿ ಹಾಗೂ ತುಮಕೂರು 1 ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರ ಸಭೆಯನ್ನು ತುಮಕೂರು 1 ಜಿಲ್ಲಾ ಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು. ತುಮಕೂರು-1 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಸುವರ್ಣ ರವರು ಜನಜಾಗೃತಿ ವೇದಿಕೆಯ ಹುಟ್ಟು ಮತ್ತು ಬೆಳವಣಿಗೆ ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಸರ್ವರಿಗೂ ಸ್ವಾಗತವನ್ನು ಬಯಸಿದರು. ವೇದಿಕೆಯಲ್ಲಿ ಹಾಸೀನರಿದ್ದ ಗಣ್ಯಮಾನ್ಯರುಗಳು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿಗಳು ಮತ್ತು ಗೌರವಾನ್ವಿತ ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ವಿವೇಕ್ ವಿ. ಪೖಾಸ್ ರವರು ಕಾರ್ಯಕ್ರಮದ ದ್ಯೇಯೋದ್ದೇಶಗಳಾದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಕಲ್ಪನೆ, ಉದ್ದೇಶ, ವಿದ್ಯಾರ್ಥಿ ಜೀವನದ ಗುರಿ-ಉದ್ದೇಶ, ಸ್ವಾಸ್ಥ್ಯ ಸಂಕಲ್ಪ-ದೈಹಿಕ, ಮಾನಸಿಕ, ಕುಟುಂಬ, ಸಮಾಜ, ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪುವ ಕಾರಣಗಳು ಹಾಗೂ ಘಟನಾವಳಿಗಳು, ದೃಷ್ಟಾಂತಗಳು ಹಾಗೂ ಪರಿಣಾಮಗಳು, ಅಪಾಯಗಳು, ಅನಾಹುತಗಳು, ಮನೆಯಲ್ಲಿ, ಕುಟುಂಬದಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ವಿದ್ಯಾರ್ಥಿಯಲ್ಲಿ ಆರೋಗ್ಯದ ಮೇಲಿನ ಪರಿಣಾಮಗಳ ವಿವರ. ಹದಿಹರಿಯದಲ್ಲಿನ ಒತ್ತಡಗಳು, ತಂದೆ-ತಾಯಿಯರ ಒತ್ತಡ, ಸ್ನೇಹಿತರ ಒತ್ತಡ ಮತ್ತು ಜೀವನಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಲಿಂಗ ತಾರತಮ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚತ್ಯ ಸಂಸ್ಕೃತಿ, ಸಹವಾಸ ಪ್ರವೃತ್ತಿ, ಸಕಾರಾತ್ಮಕ ಚಿಂತನೆಗಳು ಈ ಎಲ್ಲಾ ಸಮಸ್ಯೆಗಳಿಗೆ ವ್ಯಸನಗಳೇ ಮುಖ್ಯ ಕಾರಣ. ಪರಿಹಾರ – ಜೀವನ ಕೌಶಲ್ಯಗಳು, ಸ್ವಾಸ್ಥ ಸಂಕಲ್ಪ ಪ್ರತಿಜ್ಞೆ ಅಂಶಗಳ ಬಗ್ಗೆ ಪರಿಪೂರ್ಣವಾಗಿ ಉದಾಹರಣೆ ಸಹಿತವಾಗಿ ತಿಳಿಸಿದರು ಮತ್ತು ಸಮಾಜದಲ್ಲಿ ಮಾದಕ ವಸ್ತುಗಳಿಂದ ಆಗುತ್ತಿರುವಂತಹ ಅನಾನುಕೂಲಗಳು ಮತ್ತು ಅಹಿಕತರ ಘಟನೆಗಳು ಸಂಭವಿಸಿದಂತೆ ನೋಡಿಕೊಳ್ಳುವ ಮಹತ್ತರ ಜವಬ್ದಾರಿ ಸ್ವಾಸ್ಥ್ಯ ಸಂಕಲ್ಪ ತರಬೇತುದಾರರ ಮೇಲಿದೆ ಎಂದು ತಿಳಿಸಿ ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಪೌಢಶಾಲೆ ವಿದ್ಯಾರ್ಥಿಗಳು, ಕಾಲೇಜು ಶಿಕ್ಷಣ ವ್ಯವಸ್ಥೆಯ ವಿದ್ಯಾರ್ಥಿಗಳು, ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಆಯಾ ವಯಸ್ಸಿಗೆ ಅನುಗುಣವಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ವಿಚಾರಗಳನ್ನು ಬಹಳ ಸಂಕ್ಷೀಪ್ತವಾಗಿ ತಿಳಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಬೇಕೆಂದು ತಿಳಿಸುವ ಮೂಲಕ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು. ತುಮಕೂರು 1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷರಾದ ಶ್ರೀ ಅಮರನಾಥ್ ಶೆಟ್ಟಿ ರವರು ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಶ್ರೀ ತಿಮ್ಮಯ್ಯ ನಾಯ್ಕ, ತುಮಕೂರು 1 ಜಿಲ್ಲೆಯ MIS ಯೋಜನಾಧಿಕಾರಿ ಶ್ರೀಮತಿ ಪ್ರಭಾ ಶೆಟ್ಟಿ, ತಿಪಟೂರು ಮತ್ತು ತಿಪಟೂರು ಗ್ರಾಮಾಂತರ ಯೋಜನಾಧಿಕಾರಿಗಳಾದ ಶ್ರೀ ಉದಯ್, ಶ್ರೀ ಸುರೇಶ್, ಗುಬ್ಬಿ ಯೋಜನಾಧಿಕಾರಿ ಶ್ರೀಮತಿ ಜಯಂತಿ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕ ಶ್ರಿ ಎಂ. ಎಸ್. ದರ್ಶನ್, ತುಮಕೂರು 1 ಜಿಲ್ಲಾ ಆಡಿಟ್ ಪ್ರಬಂಧಕರಾದ ಶ್ರೀ ರಾಜೇಶ್, ತುಮಕೂರು 1 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಮತ್ತು ಸ್ವಾಸ್ಥ್ಯ ಸಂಕಲ್ಪ ತರಬೇತುದಾರರು ಉಪಸ್ಥಿತರಿದ್ದರು.