ಚಿಕ್ಕಮಗಳೂರು ತಾಲೂಕಿನ ವಿಪತ್ತು ನಿರ್ವಹಣಾ ಘಟಕದ ಉದ್ಘಾಟನಾ ಸಮಾರಂಭ

Janajagurthi Vedike News

ಚಿಕ್ಕಮಗಳೂರು ತಾಲೂಕಿನ ವಿಪತ್ತು ನಿರ್ವಹಣಾ ಘಟಕದ ಉದ್ಘಾಟನಾ ಸಮಾರಂಭಸಮಾರಂಭದಲ್ಲಿ ೮೩ ಮಂದಿ ಸ್ವಯಂ ಸೇವಕರು ಮತ್ತು ಸಂಯೋಜಕರು ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿರುತ್ತಾರೆ. ಕಾರ್ಯಕ್ರಮವನ್ನು ಡಾ|| ಕಾಂತರಾಜ್ ತಹಶೀಲ್ದಾರರು ಚಿಕ್ಕಮಗಳೂರು ನೆರವೇರಿಸಿದರು. ತೇಗೂರು ಜಗದೀಶ್ ವಿಪತ್ತು ನಿರ್ವಹಣಾ ಕೋಶದ ದೀಕ್ಷಿತ್ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲ್ಯಾನ್ ನಿರ್ದೇಶಕರಾದ ಪ್ರಕಾಶ್ ರಾವ್ ಯೋಜನಾಧಿಕಾರಿ ಜೈವಂತ್ ಪಟಗಾರ ಎನ್.ಡಿ.ಆರ್.ಎಫ್ ಕಮಾಂಡರ್ ಶ್ರೀ ಪ್ರವೀಣ್ ಕುಮಾರ್ ಉಪಧ್ಯಾಯ ಉಪಸ್ಥಿತರಿದ್ದರು. ಯೋಜನೆಯ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ|| ಎಲ್. ಹೆಚ್. ಮಂಜುನಾಥ್ ವರ್ಚುಯಲ್ ಕಾನ್ಫರೆನ್ಸ್ ಮೂಲಕ ಸ್ವಯಂ ಸೇವಕರನ್ನು ಉದ್ದೇಶಿಸಿ ಪ್ರೇರಣಾದಾಯಕವಾದ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ರಾಂಪುರದ ಚಿಂತಾಮಣಿ ಸರಸ್ವತಿ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಗೌರಿಕೆರೆ ನಲ್ಲೂರಿನಲ್ಲಿ ವಿಶಾಲವಾದ ಕೆರೆಯಲ್ಲಿ ನೀರಿನ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು.