ಚನ್ನರಾಯಪಟ್ಟಣ ಜಿಲ್ಲಾ ವ್ಯಾಪ್ತಿಯ ಗಾಂಧಿ ಜಯಂತಿ ಅಂಗವಾಗಿ ಪಟ್ಟಣದ ನವೋದಯ ಶಾಲಾ ಆವರಣದಲ್ಲಿ ನಡೆಯಿತು .ಕಾರ್ಯಕ್ರಮದ ಉದ್ಘಾಟನೆಯನ್ನು ಮತ್ತು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಶ್ರವಣಬೆಳಗೊಳದ ಶಾಸಕರಾದ ಬಾಲಕೃಷ್ಣ ರವರು ಪೂಜ್ಯರ ಕನಸು ನನಸಾಗಲು ನಾವೆಲ್ಲರೂ ಕೈಜೋಡಿಸಬೇಕು ಎಂದು ನುಡಿದರು .ವೇದಿಕೆಯಲ್ಲಿ ಡಿ ವೈ ಎಸ್ ಪಿ ಮುರಳೀಧರ್ ದುಶ್ಚಟಗಳಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿಯಪಡಿಸಿದರು ಪ್ರಾದೇಶಿಕ ನಿರ್ದೇಶಕರಾದ *ಬಿ ಜಯರಾಮ ನೆಲ್ಲಿತ್ತಾಯ ರವರು ಪೂಜ್ಯರು ಜನ ಜಾಗೃತಿಯ ಬಗ್ಗೆ ಇಟ್ಟುಕೊಂಡ ಕನಸು ನನಸಾಗುತ್ತಿರುವ ರೀತಿ ನವಜೀವನ ಸಮಿತಿ ಸದಸ್ಯರ ಪರಿವರ್ತನೆಯ ವಿಚಾರಗಳನ್ನು ಎಳೆಎಳೆಯಾಗಿ ನೆರೆದ ಮಂದಿಗೆ ಅರ್ಥೈಸಿದರು, ವೇದಿಕೆಯಲ್ಲಿ ನಾಗೇಶ್ ಆಸ್ಪತ್ರೆಯ ಮುಖ್ಯಸ್ಥರಾದ ನಾಗೇಶ್ , ಪುರಸಭಾ ಅಧ್ಯಕ್ಷರಾದ ಲತಾ ಮಂಜುನಾಥ್ ,ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಜಿಲ್ಲಾ ವ್ಯಾಪ್ತಿಯ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ರಾಜೇಶ್ ,ಜನಜಾಗೃತಿ ಸದಸ್ಯರುಗಳು ಉಪಸ್ಥಿತರಿದ್ದರು ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ವೇದಿಕೆಯ ಅಧ್ಯಕ್ಷರಾದ ಜಯರಾಮ್ ತೋಟಿ ಹಿರೀಸಾವೆ ವಹಿಸಿದ್ದರು .ಕಾರ್ಯಕ್ರಮಕ್ಕೆ ಮುಂಚಿತವಾಗಿ ಜನ ಜಾಗೃತಿ ಜಾಥಾವು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು ಕಾರ್ಯಕ್ರಮದಲ್ಲಿ ಸಾಧಕ ನವಜೀವನ ಸಮಿತಿಯ ಸದಸ್ಯ ಉದಯಪುರದ ರಮೇಶ್ ದಂಪತಿಗಳನ್ನು ಗೌರವಿಸಿ, ಪ್ರಸ್ತುತ ವರ್ಷ ನಡೆದ ಶಿಬಿರದಲ್ಲಿ ಭಾಗವಹಿಸಿದ ನವಜೀವನ ಸಮಿತಿ ಸದಸ್ಯರನ್ನು ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು. ಅದ್ಬುತ ಕಾರ್ಯಕ್ರಮಕ್ಕೆ ನವಜೀವನ ಸಮಿತಿಯ ಸದಸ್ಯರುಗಳು ಮತ್ತು ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಕಾರಣಿಭೂತರಾದರು . ಜಾಗೃತಿ ಜಾಥಾವು ಪೇಟೆಯ ಮುಖ್ಯ ರಸ್ತೆಗಳಲ್ಲಿ ಸಾಗಿ ಜನಮನಸೆಳೆಯಿತು.ಕಾರ್ಯಕ್ರಮದ ಯಶಸ್ವಿಗೆ ,ಚನ್ನರಾಯಪಟ್ಟಣ ಶ್ರವಣಬೆಳಗೊಳ ಹೊಳೆನರಸೀಪುರ ,ಕಿಕ್ಕೇರಿ, ಕೆ ಆರ್ ಪೇಟೆ, ತಾಲ್ಲೂಕುಗಳ ಹಾಗೂ ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿಗಳು ಸಹಕರಿಸಿದರು.
