ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮ ವ್ಯಾಪ್ತಿಗಳಲ್ಲಿ ಗ್ರಾಮ ಸಮಿತಿ ಪುನರ್‌ರಚನೆಯ ಕಾರ್ಯಕ್ರಮ ನಡೆಯುತ್ತಿದೆ. ಈ ಮೂಲಕ ತಾಲೂಕಿನಾದ್ಯಂತ ೧೨೧೫ ಪದಾಧಿಕಾರಿಗಳು ಗ್ರಾಮ ಸಮಿತಿಗೆ ಆಯ್ಕೆಯಾಗಿರುತ್ತಾರೆ. ವ್ಯಸನಮುಕ್ತ ಗ್ರಾಮಗಳ ಪರಿಕಲ್ಪನೆಯಲ್ಲಿ ಸ್ವಾಸ್ಥö್ಯ ಸಮಾಜವನ್ನು ನಿರ್ಮಾಣ ಮಾಡುವ ಧ್ಯೇಯೊದ್ದೇಶಗಳÀನ್ನು ಇಟ್ಟುಕೊಂಡು ಈ ಸಮಿತಿಗಳು ಕಾರ್ಯನಿರ್ವಹಿಸಲಿದೆ. ಸಮಾಜದಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಆಶಯದೊಂದಿಗೆ ಜನರ ಸಹಭಾಗಿತ್ವದಲ್ಲಿ ಪ್ರಾರಂಭಗೊAಡ “ಜನಜಾಗೃತಿ ಕಾರ್ಯಕ್ರಮ” ವ್ಯಸನಿಗಳ ಪಾಲಿಗೆ ವರದಾನವಾಗಿ ಕುಟುಂಬಗಳಿಗೆ ದಾರಿದೀಪವಾಗಿ, ಸಮುದಾಯದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ವ್ಯಸನಗಳ ವಿರುದ್ಧ ಜಾಗೃತಿ ಮೂಢಿಸುತ್ತಿದೆ.
