ಗೌರವಾನ್ವಿತ ಶ್ರೀ ಮಂಜುನಾಥ್ ಕುನ್ನೂರು ಮಾಜಿ ಸಂಸದರು ಹಾವೇರಿ ಜಿಲ್ಲೆ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು

Janajagurthi Vedike News

ಭಾರತ ದೇಶ ಧರ್ಮದ ತಳಹದಿಯಲ್ಲಿ ನಿಂತಿದೆ ಪಾಶ್ಚಿಮಾತ್ಯ ರಾಷ್ಟ್ರಗಳು ಭೋಗದ ಜೀವನಕ್ಕೆ ಒತ್ತು ನೀಡಿದರೆ ನಮ್ಮ ದೇಶ ಆಧ್ಯಾತ್ಮಿಕತೆಗೆ ಒತ್ತು ನೀಡಿದೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿರುವುದು ಹೆಮ್ಮೆಯ ಸಂಗತಿ ಇದಕ್ಕಾಗಿ ಈ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಪೂಜ್ಯರ ಮಾರ್ಗದರ್ಶನ ತಮ್ಮೆಲ್ಲರಿಗೂ ಸದಾ ಸಿಗಬೇಕು, ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯರು ಮಾಡುವ ಕೆಲಸವನ್ನು ನೋಡಿದಾಗ ಸರ್ಕಾರಕ್ಕೂ ಸಾಧ್ಯವಾಗದ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಮೂಲಕ ಧರ್ಮಾಧಿಕಾರಿಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ, ಯೋಜನೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳಕ್ಕೆ ವಿಸ್ತಾರವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಯ ಕಾರ್ಯಕ್ರಮಗಳು ಸಮಾಜಕ್ಕೆ ಅನುಕೂಲವಾಗಿದೆ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು