ಗಾಂಧೀ ಸ್ಮೃತಿ ಹಾಗೂ ನವ ಜೀವನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬೆಳಗಾವಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ 01 ಜಿಲ್ಲೆ. ನವಜೀವನ ಸಮಿತಿ ಬೆಳಗಾವಿ
ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಕಾರ್ಯಕ್ರಮವನ್ನು ಕಾಕತಿ ಗ್ರಾಮದ ಸಿದ್ದೇಶ್ವರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಐ. ಎಸ್ ಗುರುನಾಥ್ ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಹಾತ್ಮಾ ಗಾಂಧೀಜಿ ರವರ ವಿಚಾರದಾರೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಪೂಜ್ಯ ಡಾ||ಡಿ. ವೀರೇಂದ್ರ ಹೆಗ್ಗಡೆಯವರ ಸಮಾಜಕ್ಕೆ ನೀಡುತ್ತಿರುವ ವಿಚಾರದಾರೆಗಳ ಕುರಿತು ತಿಳಿಸಿದರು, ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ G R ಸೋನೆರ ರವರು ಮದ್ಯಪಾನಾದಿ ದುಶ್ಚಟಗಳಿಂದ ಸಾವಿರಾರು ಕುಟುಂಬಗಳು ಬಿದಿಗೆ ಬಂದಿರುತ್ತವೆ ಈ ಮದ್ಯವ್ಯಸನವನ್ನು ಬಿಟ್ಟು ನವಜೀವನ ನಡೆಸಬೇಕು ಈ ದಿಶೆಯಲ್ಲಿ ರಾಜ್ಯಾದ್ಯಂತ ವೇದಿಕೆ ಮೂಲಕ ಸುಮಾರು 1600 ಸಿಬಿರಗಳನ್ನು ಆಯೋಜನೆ ಮಾಡಿ ಸುಮಾರು 1.40 ಲಕ್ಷ ಸದಸ್ಯರನ್ನು ಕುಡಿತಬಿಟ್ಟು ನವಜೀವನ ಪ್ರಾರಂಭಿಸಿ ಉತ್ತಮ ಜಿವನ ನಡೆಸುತ್ತಿದಾರೆ, ಮದ್ಯಪಾನ ವಿರೋದಿಸುವ ಬಗ್ಗೆ ಕಾರ್ಯಕ್ರಮದಲ್ಲಿ ಹಕ್ಕೊತ್ತಾಯ ಮಂಡನೆ ಮಾಡಿದರು, ಕಾರ್ಯಕ್ರಮದ ಕುರಿತಂತೆ ಜಿಲ್ಲಾ ನಿರ್ದೇಶಕರಾದ ಶ್ರೀ ಪ್ರದೀಪ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಕಲಚೇತನರಿಗೆ ಉಪಕರಣಗಳನ್ನು ವಿರಿಸಿದರು, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ದುದ್ದಪ್ಪ ಬಾಗೇವಾಡಿ, ದೇವಸ್ಥಾನ ಕಮೀಟಿ ಸದಸ್ಯರಾದ ಶ್ರೀ ಸಿದ್ದಪ್ಪ ತುಮರಿ, ಲಕ್ಷ್ಮಣ ಕೊಳೇಕರ ಬಸವಣ್ಣೆವ್ವ ಜವಳಿ , ಬಸವರಾಜ ಗಾಣಿಗೇರ ಉಪಸ್ಥಿತರಿದ್ದರು ಯೋಜನಾಧಿಕಾರಿ ನಾಗರಾಜ ಹದ್ಲಿ ಸ್ವಾಗತಿಸಿದರು, ವೈಶಾಲಿ ಕಾರ್ಯಕ್ರಮ ನಿರೂಪಿಸಿದರು, ಮೇಲ್ವಿಚಾರಕಿ ಗಂಗಾ ವಂದಿಸಿದರು ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯ ಸದಸ್ಯರುಗಳು, ವಲಯದ ಸೇವಾಪ್ರತಿನಿಧಿಗಳು ಯೋಜನೆಯ ಪಾಲುದಾರ ಬಂಧುಗಳು ಹಾಜರಿದ್ದರು.