ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ, 1898 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕೋಳಾಲ ವಲಯ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ.) ಕೊರಟಗೆರೆ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ತುಮಕೂರು 2 ಜಿಲ್ಲೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಕೋಳಾಲ, ತೀತ ವಲಯ ನವಜೀವನ ಸಮಿತಿಗಳು, ಕೊರಟಗೆರೆ ತಾಲೂಕು ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಕಾರದೊಂದಿಗೆ 1898 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠ ಎಲೆರಾಂಪುರದ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಶ್ರೀ ತಿಮ್ಮಯ್ಯ ನಾಯ್ಕ ರವರು ಜನಜಾಗೃತಿ ವೇದಿಕೆಯ ಹುಟ್ಟು, ಬೆಳವಣಿಗೆ ಹಾಗೂ ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುವ ಮೂಲಕ 1898 ನೇ ಮದ್ಯವರ್ಜನ ಶಿಬಿರದ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ ಶ್ರೀ ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿಯವರು ಕುಂಚಿಟಿಗರ ಮಹಾ ಸಂಸ್ಥಾನ ಮಠ ಎಲೆರಾಂಪುರ ಹಾಗೂ ವೇದಿಕೆಯಲ್ಲಿದ್ದ ಗಣ್ಯ ಮಾನ್ಯರುಗಳು ದೀಪ ಪ್ರಜ್ವಲಿಸುವ ಮೂಲಕ 1898 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ತುಮಕೂರು 2 ಜಿಲ್ಲೆಯ ಮಾನ್ಯ ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ ಡಿ. ರವರು ಜನಜಾಗೃತಿ ವೇದಿಕೆಯಿಂದ ನಡೆಸಿಕೊಡುವ ಕಾರ್ಯಕ್ರಮಗಳ ಕುರಿತು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾರ್ವಜನಿಕರ ಅನುಕೂಲಕ್ಕೆ ಹಾಗೂ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ ಮುಖ್ಯ ಅತಿಥಿಗಳ ನುಡಿಗಳನ್ನು ನುಡಿದರು. ಶ್ರೀ ಮಠದ ಮಹಾ ದಾನಿಗಳು ಹಾಗೂ ವೈದ್ಯರಾದ ಶ್ರೀ ಡಾ. ನವೀನ್ ದೇವರಾಜಯ್ಯನವರು ಕಾರ್ಯಕ್ರಮದಲ್ಲಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ನಡೆಯುತ್ತಿರುವಂತಹ ಈ ಮಹತ್ಕಾರ್ಯವನ್ನು ನಡೆಸಲು ಮತ್ತಷ್ಟು ಅನುಗ್ರಹವನ್ನು ಕ್ಷೇತ್ರದ ಮಂಜುನಾಥಸ್ವಾಮಿಯು ನೀಡಲಿ ಎಂದು ಶುಭಹಾರೖಸಿದರು. ತುಮಕೂರು 2 ಜಿಲ್ಲೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಪ್ರದೀಪ್ ಕುಮಾರ್ ಎಚ್. ಎಸ್., ಶ್ರೀ ಕೆ. ಎಲ್. ರಾಜಣ್ಣ, ಶ್ರೀ ಟಿ. ಕೆ. ಜಗದೀಶ್, ಶ್ರೀಮತಿ ಮಮತಾ ದಿವಾಕರ್, ಶ್ರೀ ಕೆ. ಎಸ್. ಈಶ್ವರಯ್ಯ ಮಾಜಿ ನಿರ್ದೇಶಕರು ಕೆ.ಎಂ.ಎಫ್ ರವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಕೆ ನುಡಿಗಳನ್ನು ನುಡಿದರು. ಶ್ರೀ ಶ್ರೀ ಶ್ರೀ ಡಾ|| ಹನುಮಂತನಾಥ ಸ್ವಾಮೀಜಿಗಳು ಕುಂಚಿಟಿಗರ ಮಹಾಸಂಸ್ಥಾನ ಮಠ ಎಲೆರಾಂಪುರ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ದೂರದ ಧರ್ಮಸ್ಥಳದ ಹೆಗ್ಗಡೆಯವರಿಗೂ ತುಮಕೂರಿನ ಜನತೆಗೂ ಎತ್ತಣಿಂದೆತ್ತ ಸಂಬಂದ ಆದರು ಸಹ ತುಮಕೂರು ಜಿಲ್ಲೆಯ ಜನ ಮದ್ಯ ವ್ಯಸನದಿಂದ ಮುಕ್ತರಾಗಿ ನೆಮ್ಮದಿಯ ಸುಂದರ ಸಂಸಾರವನ್ನು ನಡೆಸಲು ಪೂಜ್ಯರ ಪ್ರೀತಿಗೆ ಪಾತ್ರವಾದ ಮದ್ಯವರ್ಜನ ಶಿಬಿರವನ್ನು ಮಠದಲ್ಲಿ ನಡೆಸಲು ಅವಕಾಶ ದೊರತದ್ದು ಸಂತೋಷವಾದ ವಿಚಾರವಾಗಿದ್ದು. ಪೂಜ್ಯರ ಮದ್ಯವರ್ಜನ ಶಿಬಿರ ನನ್ನ ಅತ್ಯಂತ ಪ್ರೀತಿಯ ಕಾರ್ಯಕ್ರಮವು ಸಹ ಆದ್ದರಿಂದ ನಾನು ಎಂಟು ದಿನಗಳ ಕಾಲ ಯಾವುದೇ ಕಾರ್ಯಕ್ರಮಗಳಿಗೆ ಪ್ರಯಾಣ ಬೆಳಸದೆ ಪ್ರತಿದಿನ ಬೆಳಗ್ಗೆ, ಮದ್ಯಾಹ್ನ, ರಾತ್ರಿಯು ಸಹ ನಿಮ್ಮಗಳ ಜೊತೆ ಇರತ್ತೇನೆಂದು ಶಿಬಿರಾರ್ಥಿಗಳಿಗೆ ಅಭಯವನ್ನು ನೀಡಿದರು. ಸಮಾಜದಲ್ಲಿ ದೂರದಲ್ಲಿ ನಿಲ್ಲುವಂತಹ ವ್ಯಕ್ತಿಗಳನ್ನು ಸಹ ನಮ್ಮವರೆಂದೆ ಭಾವಿಸಿ ಹತ್ತಿರಕ್ಕೆ ಕರೆದು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿ ಮಾಡಿ ಹಾಲಿನ ಡೈರಿ, ದೇವಾಲಯ, ಕೆರೆಗಳ ಪುನಷ್ಚೇತನಕ್ಕೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉದಾರವಾಗಿ ಕೋಟ್ಯಾಂತರ ರೂಗಳನ್ನು ನೀಡುತ್ತಿರುವ ಏಕೖಕ ಶ್ರೇಷ್ಠ ವ್ಯಕ್ತಿಗಳೆಂದರೆ ಪೂಜ್ಯ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ ಯವರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತ್ರ ಎಂದು ತಿಳಿಸಿ ಶುಭಾಶೀರ್ವಚನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಶ್ರೀ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿ ಕು ರಂಜಿತಾ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆ ಮೇಲ್ವಿಚಾರಕ ಶ್ರೀ ದರ್ಶನ್ ಎಂ. ಎಸ್., ಶಿಡ್ಲಘಟ್ಟ ಯೋಜನಾ ಕಚೇರಿ ವ್ಯಾಪ್ತಿಯ ಮೇಲ್ವಿಚಾರಕರು, ಆಂತರಿಕ ಲೆಕ್ಕ ಪರಿಶೋಧಕರು, ಕೃಷಿ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಆಡಳಿತ ಸಹಾಯಕ ಪ್ರಬಂಧಕರು, ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
