ಕೆ ಆರ್ ನಗರ ತಾಲೂಕಿನ ಶ್ರೀವಾನುಭವ ಕಲ್ಯಾಣ ಮಂಟಪದಲ್ಲಿ ಗಾಂಧಿ ಮತ್ತು ನವಜೀವನ ಸದಸ್ಯರ ಅಭಿನಂದನ ಕಾರ್ಯಕ್ರಮ

Janajagurthi Vedike News

ಕೆ ಆರ್ ನಗರ ತಾಲೂಕಿನ ಶ್ರೀವಾನುಭವ ಕಲ್ಯಾಣ ಮಂಟಪದಲ್ಲಿ ಗಾಂಧಿ ಮತ್ತು ನವಜೀವನ ಸದಸ್ಯರ ಅಭಿನಂದನ ಕಾರ್ಯಕ್ರಮ ನಡೆಯಿತು ಉದ್ಘಾಟನೆಯನ್ನು ಶ್ರೀಶ್ರೀ ನಟರಾಜ ಸ್ವಾಮಿಗಳು ಜಂಗಮ ದೇವರ ಮಠ ದಾವಣಗೆರೆ ಉದ್ಘಾಟಿಸಿ ಜನರ ಆಶೋತ್ತರಗಳನ್ನು ಈಡೇರಿಸುವ ಸಂಸ್ಥೆ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಈ ಕೈಂಕರ್ಯವನ್ನು ಮಾಡುತ್ತಿರುವ ಧರ್ಮಾಧಿಕಾರಿಗಳು ಅಭಿನಂದನಾರ್ಹರು ಎಂದು ಬಣ್ಣಿಸಿದರು. ತಶಿಲ್ದಾರ್ ಶ್ರೀ ಸಂತೋಷ್ ಠರಾವು ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಜೊತೆಗೆ ಮುಕ್ತ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸುತ್ತೇನೆ ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ವಹಿಸಿ ಜನಜಾಗೃತಿಯ ವೇದಿಕೆಯ ಕಾರ್ಯಚಟುವಟಿಕೆಗಳು ಇನ್ನು ಮುಂದೆ ಸರಾಗವಾಗಿ ನಡೆಯುತ್ತದೆ ಎಂದರು. ಜಿಲ್ಲಾ ನಿರ್ದೇಶಕರಾದ ಮುರಳಿಧರ ಹೆಚ್ ಎಲ್ ಯೋಜನೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಸುಬ್ರಮಣ್ಯ ಜನಜಾಗೃತಿ ವೇದಿಕೆಯ ಸದಸ್ಯರು, ಯೋಜನಾಧಿಕಾರಿ ಗಣಪತಿ ಭಟ್, ಭಾಸ್ಕರ್ ,ಉಪಸ್ಥಿತರಿದ್ದರು. ಪ್ರಥಮದಲ್ಲಿ ಜನ ಜಾಗೃತಿ ಜಾಥ ಬೀದಿಯಲ್ಲಿ ಸಂಚರಿಸಿತು ಸಾಧಕ ನವಜೀವನ ಸದಸ್ಯರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದ ಬಳಿಕ ಜನಜಾಗೃತಿಯ ಕುರಿತಾದ ಬೀದಿ ನಾಟಕ ಶೃತಿ ಬೀದಿನಾಟಕ ತಂಡ ದಾವಣಗೆರೆ ಯವರಿಂದ ನಡೆಸಲಾಯಿತು ಮೇಲ್ವಿಚಾರಕರು, ನವಜೀವನ ಸದಸ್ಯರು ಉಪಸ್ಥಿತರಿದ್ದರು.