ಕುಮಟಾ ತಾಲೂಕಿನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕುಮಟಾ ತಾಲೂಕು ಜನಜಾಗ್ರತಿ ವೇದಿಕೆ ಕುಮಟಾ ಇವರ ಸಹಯೋಗದಲ್ಲಿ ರೋಟರಿ ಕ್ಲಬ್ ಕುಮಟಾ ಸಭಾಂಗಣದಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿ ಕಾರ್ಯಕ್ರಮ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಮಾನ್ಯ ದಿನಕರ ಶೆಟ್ಟಿ ಯವರು ಉಧ್ಘಾಟಿಸಿದರು ಈ ಕಾರ್ಯಕ್ರಮದಲ್ಲಿಉತ್ತರ ಕನ್ನಡ ಜಿಲ್ಲಾ ಜನಜಾಗ್ರತಿ ವೇದಿಕೆ ಅಧ್ಯಕ್ಷರು ಶ್ರೀ ಮಹೇಶ್ ನಾಯ್ಕ ,ಮತ್ತು ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಗಳಾಗಿ ಶ್ರೀ ಯೋಗಾನಂಧ ಗಾಂಧೀ ,ಶ್ರೀಮತಿ ಮಮತಾ ನಾಯ್ಕ್ ,ಶ್ರೀ ವಾಸುದೇವ ನಾಯ್ಕ್ ಹಾಗೂ ಯೋಜನಾಧಿಕಾರಿಗಳಾದ ಶ್ರೀ ಕಲ್ಮೇಶ ರವರು ಹಾಜರಿದ್ದರು.ಹಾಗೂ ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ವಿಪತ್ತು ನಿರ್ವಹಣಾ ಸದಸ್ಯರು , ನವಜೀವನ ಸಮಿತಿ ಸದಸ್ಯರು,ತಾಲೂಕಿನ ಸೇವಾ ಪ್ರತಿನಿಧಿಗಳು 3 ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಮತ್ತು ಮೇಲ್ವಿಚಾರಕರು ಭಾಗವಹಿಸಿದರು