ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಪ್ರಥಮವಾಗಿ ನಡೆಯುತ್ತಿರುವ 1600 ನೇ ಮಧ್ಯವರ್ಜನ ಶಿಬಿರದ ಉದ್ಘಾಟನೆಯನ್ನು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಶ.ಬ್ರ. ರೇವಣಸಿದ್ಧ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಮಾನ್ಯ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀ ತಿಪ್ಪಣ್ಣಪ್ಪ ಕಮಕನೂರು ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಮೇಶ್ ಬಿದನೂರ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕಲ್ಬುರ್ಗಿ ಜಿಲ್ಲಾ ಯೋಜನಾ ನಿರ್ದೇಶಕರಾದ ಶ್ರೀ ಸತೀಶ್ ಸುವರ್ಣ ಸರ್, ಕಲ್ಬುರ್ಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಇಶಾ ಪಂತ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಲ್ಲಮಪ್ರಭು ಪಾಟೀಲ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಅನುಪಮಾ ರಮೇಶ್ ಕಮಕನೂರು ಉಪಸ್ಥಿತರಿದ್ದು ಶುಭ ಹಾರೈಸಿರುತ್ತಾರೆ, ಪ್ರಾಸ್ತಾವಿಕ ನುಡಿಗಳನ್ನು ಜನಜಾಗೃತಿ ವೇದಿಕೆ ಕಲ್ಬುರ್ಗಿ ಪ್ರಾದೇಶಿಕ ಯೋಜನಾಧಿಕಾರಿಗಳಾದ ಶ್ರೀ ರಾಜೇಶ್ ಸರ್ ಅವರು ನೀಡಿರುತ್ತಾರೆ. ಕ್ಷೇತ್ರ ಯೋಜನಾಧಿಕಾರಿಗಳಾದ ಕಲ್ಲನಗೌಡ ಸರ್ ಸ್ವಾಗತಿಸಿದ್ದು ಧನ್ಯವಾದ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕಿಯಾದ ಶ್ರೀಮತಿ ಗಿರಿಜಾ ಅವರು ನೀಡಿರುತ್ತಾರೆ.
